ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಿಯರ ಮನದಾಳ: ಗೃಹೋತ್ಪನ್ನ ಮಾರುಕಟ್ಟೆಗೆ ಆದ್ಯತೆ– ಎಂ.ಪಿ. ಲತಾ ಮಲ್ಲಿಕಾರ್ಜುನ

Published 27 ಮೇ 2023, 0:01 IST
Last Updated 27 ಮೇ 2023, 0:01 IST
ಅಕ್ಷರ ಗಾತ್ರ

ನನ್ನ ತಂದೆ (ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌) ಪ್ರಭಾವ ನನ್ನ ಮೇಲೆ ಬಹಳ ಇದೆ. ನಮ್ಮ ಮನೆಯಲ್ಲೂ ರಾಜಕೀಯದ ವಾತಾವರಣವಿತ್ತು. ತಂದೆಯೊಂದಿಗಿನ ಒಡನಾಟದಿಂದ ನನ್ನಲ್ಲಿ ರಾಜಕೀಯದ ಅರಿವು ಮೂಡಲು ಕಾರಣವಾಯಿತು. ಆದರೆ, ಅವರ ನಿಧನದ ನಂತರ ರಾಜಕೀಯ ಆಸಕ್ತಿ ಇರಲಿಲ್ಲ. ನನ್ನ ಸಹೋದರ (ಮಾಜಿಶಾಸಕ ಎಂ.ಪಿ. ರವೀಂದ್ರ) ತೀರಿಕೊಂಡ ನಂತರ ಆಕಸ್ಮಿಕವಾಗಿ ರಾಜಕೀಯಕ್ಕೆ ಬರಬೇಕಾಯಿತು. ಅವನಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಹಳ ಕನಸುಗಳಿದ್ದವು. ಅದನ್ನು ನನಸಾಗಿಸಲು ಹರಪನಹಳ್ಳಿಯ ಜನ ನನ್ನ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆ ಹುಸಿಯಾಗಿಸುವುದಿಲ್ಲ.

ನನ್ನ ಕ್ಷೇತ್ರದಲ್ಲಿ ಬಹಳ ಮಂದಿ ಹೆಣ್ಣು ಮಕ್ಕಳಿಗೆ ಉದ್ಯೋಗವಿಲ್ಲ. ಮನೆಯಲ್ಲಿ ಶಾವಿಗೆ, ಹಪ್ಪಳ ತಯಾರಿಸಿ ಮಾರಾಟ ಮಾಡುತ್ತಾ, ಜೀವನ ನಡೆಸುತ್ತಿದ್ದಾರೆ. ಮಾರುಕಟ್ಟೆ ಕೊರತೆ ಇದೆ. ಹಾಗೆಯೇ ಇಷ್ಟರಿಂದಲೇ ಬದುಕು ನಡೆಯುವುದಿಲ್ಲ. ಅವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ನನ್ನ ಗುರಿ.‌‌ ನನಗೆ ಇನ್ಫೋಸಿಸ್ ಕಂಪನಿಯ ಸುಧಾಮೂರ್ತಿ ಸುಧಾಮೂರ್ತಿ ಅವರ ಪರಿಚಯವಿದೆ. ಹುಬ್ಬಳ್ಳಿಯಲ್ಲಿ ಅವರ ಘಟಕವಿದೆ. ಅವರೊಂದಿಗೆ ಚರ್ಚಿಸಿ, ನಮ್ಮ ಕ್ಷೇತ್ರದ ಮಹಿಳೆಯರಿಗೆ ಮಾರುಕಟ್ಟೆ ಒದಗಿಸಲು ಶ್ರಮಿಸುವೆ. ಬಹಳ ಹೆಣ್ಣುಮಕ್ಕಳಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಬಗ್ಗೆಯೂ ಆಸಕ್ತಿ ಇದೆ. ಯಾರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರ ಬಗ್ಗೆ ತರಬೇತಿ ಕೊಟ್ಟು ಅವರನ್ನು ಸ್ವಾವಲಂಬಿಗೊಳಿಸಲು ಶ್ರಮಿಸುತ್ತೇನೆ.

ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪುತ್ರಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಹುಟ್ಟಿದ್ದು ಹೂವಿನಹಡಗಲಿಯಲ್ಲಿ. ಪದವಿಯವರೆಗೆ ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಹರಪನಹಳ್ಳಿ ಅವರ ಗಂಡನ ಮನೆ. ಹರಪನಹಳ್ಳಿಯಲ್ಲಿ ಈವರೆಗೆ ಮಹಿಳೆಯರು ಶಾಸಕರಾಗಿರಲಿಲ್ಲ. ಮೊದಲ ಬಾರಿಗೆ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಕೊಟ್ಟೂರಿನಿಂದ ಭಾಗೀರಥಿ ಅವರು ಕಾಂಗ್ರೆಸ್‌ನಿಂದ ಗೆದ್ದಿದ್ದರು. ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಅವರ ಮೊದಲ ಆದ್ಯತೆಯಾಗಿದೆ. ಅದರಲ್ಲೂ ಮಹಿಳೆಯರ ಸ್ವಾವಲಂಬನೆಗೆ ತಮ್ಮ ಮೊದಲ ಆದ್ಯತೆ ಎನ್ನುತ್ತಾರೆ.

–ನಿರೂಪಣೆ: ಶಶಿಕಾಂತ್‌ ಶೆಂಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT