ನಾನು ಸಲೂನ್ ಹಾಗೂ ಬ್ಯೂಟಿ ಪಾರ್ಲರ್ಗಳಿಂದ ಬಹಳ ದೂರ. ಚರ್ಮ ಮತ್ತು ಕೂದಲಿನ ಆರೈಕೆಗೆ ಯಾವುದೇ ರೀತಿಯ ಸಪ್ಲಿಮೆಂಟ್ಗಳನ್ನು ಸೇವಿಸುವುದಿಲ್ಲ. ಇವುಗಳ ಆರೈಕೆಯಲ್ಲಿ ನಾವು ಸೇವಿಸುವ ಸತ್ವಯುತ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ಟ್ರಿಪಲ್ ಎಬಿಸಿ’ ಜ್ಯೂಸ್ ಕುಡಿಯುತ್ತೇನೆ. ಇದು ನೆಲ್ಲಿಕಾಯಿ, ಆ್ಯಪಲ್, ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಸೇರಿಸಿ ಮಾಡಿದ ಜ್ಯೂಸ್ ಆಗಿರುತ್ತದೆ. ಇದರಲ್ಲಿ ದಾಳಿಂಬೆಯನ್ನೂ ಸೇರಿಸಿಕೊಳ್ಳಬಹುದು. ನಿತ್ಯ ಇದರ ಸೇವನೆಯಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳು ಈ ಜ್ಯೂಸ್ನಲ್ಲಿಯೇ ಇರುವುದರಿಂದ ಸಪ್ಲಿಮೆಂಟ್ಸ್ನ ಅಗತ್ಯ ಬರುವುದಿಲ್ಲ. ಇನ್ನು ಚರ್ಮದ ಆರೋಗ್ಯಕ್ಕೆ ಆಗಾಗ್ಗೆ ಹೊಕ್ಕುಳಿಗೆ ಹರಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಹಚ್ಚುತ್ತೇನೆ.

ಸಕ್ಕರೆಯ ಸೇವನೆಯನ್ನು ಸಂಪೂರ್ಣವಾಗಿ ತೊರೆದಿದ್ದೇನೆ. ಇದರಿಂದ ದೇಹದ ತೂಕ ಇಳಿಯುವುದಲ್ಲದೆ, ಮೊಡವೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಸಿಹಿಯನ್ನು ತಿನ್ನಬೇಕೆಂಬ ಬಯಕೆ ಇಲ್ಲವೆಂದಲ್ಲ. ಆಗಾಗ ಅಂತಹ ಬಯಕೆ ಉಂಟಾದಾಗ ಬಾಳೆಹಣ್ಣು ಅಥವಾ ಡಾರ್ಕ್ ಚಾಕೊಲೇಟ್ ತಿನ್ನುತ್ತೇನೆ.

ವಜ್ರಾಸನದಲ್ಲಿ ಕುಳಿತು ಹತ್ತು ನಿಮಿಷ ಧ್ಯಾನ ಮಾಡುತ್ತೇನೆ. ಎಲ್ಲ ಬಗೆಯ ಸ್ಟ್ರೆಚ್ ವರ್ಕ್ಔಟ್ ಮಾಡುತ್ತೇನೆ. ವಜ್ರಾಸನವು ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವುದಲ್ಲದೆ, ಚರ್ಮ ಹೊಳಪಿನಿಂದ ಕೂಡಿರಲು ನೆರವಾಗುತ್ತದೆ. ಬಿಡುವಿರದ ಶೂಟಿಂಗ್ ಇರುವುದರಿಂದ ಕೂದಲಿನ ಆರೈಕೆಗೆ ಸಮಯ ಸಿಗದು. ಮನೆಯಲ್ಲಿ ರೋಸ್ಮರಿ ಕುದಿಸಿ, ಅದರಿಂದ ಬಂದ ರಸವನ್ನು ಕೊಬ್ಬರಿ ಎಣ್ಣೆ ಜತೆ ಮಿಶ್ರ ಮಾಡಿಟ್ಟುಕೊಳ್ಳುತ್ತೇನೆ. ಇದನ್ನು ರಾತ್ರಿ ವೇಳೆ ಹಚ್ಚುತ್ತೇನೆ. ಚಳಿಗಾಲವಾದ್ದರಿಂದ ಎಳನೀರು ಕುಡಿಯುತ್ತಿಲ್ಲ. ಇಲ್ಲವಾದರೆ ನಿತ್ಯ ಒಂದು ಎಳನೀರು ಜತೆಗೆ ಚೆನ್ನಾಗಿ ನೀರು ಕುಡಿಯುತ್ತೇನೆ. ಮಾನಸಿಕ ಒತ್ತಡವಿದ್ದರೂ ಚರ್ಮ ಕಳೆಗುಂದುತ್ತದೆ. ಮನಸ್ಸು ಪ್ರಫುಲ್ಲವಾಗಿದ್ದರೆ, ನಾವು ನಗುನಗುತ್ತಾ ಇದ್ದರೆ, ಸಕಾರಾತ್ಮಕ ಧೋರಣೆಯನ್ನು ಹೊಂದಿದರೆ ಅದೇ ನಿಜವಾದ ಸೌಂದರ್ಯ.

ನಿಶಾ ರವಿಕೃಷ್ಣನ್, ಕಿರುತೆರೆ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.