ಪ್ರತಿಯೊಬ್ಬ ಬದುಕಿನಲ್ಲಿ ಮದುವೆ ಎಂಬುದು ಭಾವ ಬಂಧದ ಸುಂದರ ಬೆಸುಗೆ. ಕಣ್ಣುಗಳ ತುಂಬ ಕನಸುಗಳು, ಒಡಲಲ್ಲಿ ಬಿಡಿಸಲಾಗದ ಬಾಂಧವ್ಯಕ್ಕೆ ಮುದ್ರೆ ಒತ್ತಲು ಸಜ್ಜಾಗಬೇಕಿರುವ ಆತುರ, ಕಾತರ, ಅತಿಥಿಗಳ ಮುಂದೆ ದೃಷ್ಟಿ ನಿವಾಳಿಸಿ ಒಗೆಯಬೇಕಾದಂತಹ ಚೆಲುವಿನ ಖಣಿಯಾಗಲು ಅಣಿಯಾಗುವ ತುಡಿತ, ಕಡು ಬಣ್ಣದ ರೇಷ್ಮೆ ಸೀರೆ, ಒಡಲ ತುಂಬ ಒಡವೆ. ಇಷ್ಟಿದ್ದರೆ ಸಾಕೇ, ಮದುಮಗಳು ಪರಿಪೂರ್ಣ ಎನಿಸಲು? ಕೈಗಳಲ್ಲಿ ಚಿತ್ತಾಕರ್ಷಕ ವಿನ್ಯಾಸದ ಮೆಹೆಂದಿ, ಮುಖಕ್ಕೆ ಒಪ್ಪುವಂತಹ ಮೇಕಪ್, ಅಲಂಕಾರ ಬೇಡವೇ? ವಿವಾಹ ಮಹೋತ್ಸವದಲ್ಲಿ ಮದುವಣಗಿತ್ತಿ ಎದ್ದು ಕಾಣಬೇಕಲ್ಲವೇ?

ಮದುವೆ ಎಂಬ ಜೀವನದ ಮಹತ್ತರ ಘಟ್ಟದ ದಿನ ವಧುವಿಗೆ ತಾನು ಹೇಗೆ ಕಾಣಬೇಕು, ಫ್ಯಾಷನ್ ಜಗತ್ತಿನ ಲೇಟೆಸ್ಟ್ ಟ್ರೆಂಡ್ಗೆ ಹೇಗೆ ಆತುಕೊಳ್ಳಬೇಕು, ಉಡುಪು, ಒಡವೆಗಳು ಹೇಗಿರಬೇಕು ಎಂಬ ಬಗ್ಗೆ ಮದುವೆ ನಿಕ್ಕಿಯಾದ ದಿನದಿಂದಲೇ ಲೆಕ್ಕಾಚಾರ ಶುರುವಾಗುತ್ತದೆ. ಬ್ಯೂಟಿ ಪಾರ್ಲರ್ಗೆ ಮದುವೆ ದಿನ ನಿಗದಿಯಾದ ದಿನವೇ ಬುಕ್ ಮಾಡಿಕೊಳ್ಳಬೇಕು, ಬ್ರೈಡಲ್ ಮೇಕಪ್ಗಾಗಿ ಜರ್ಮನಿ ತಂತ್ರಜ್ಞಾನದ ಮೇಕಪ್ ಕಿಟ್ಗಳು ಬಂದಿವೆ, ಹೈಡೆಫಿನಿಷನ್ ಮೇಕಪ್ ‘ಸಾಮಾನ್ಯವಾಗಿ ಎಲ್ಲ ಮದುವೆಗಳಲ್ಲಿ ವಧುವಿಗೆ ಹೈಡೆಫಿನಿಷನ್ (ಎಚ್ಡಿ) ಮೇಕಪ್ ಅನ್ನೇ ಮಾಡಲಾಗುತ್ತದೆ, ಐ ಲ್ಯಾಷನ್, ಬ್ಲೆಷ್ ಆನ್, ಶಿಮ್ಮರ್, ಲಿಪ್ಸ್ಟಿಕ್, ಕಂಸೀಲರ್ ಮುಂತಾದವನ್ನು ಬಳಸಿ ಮಾಡಲಾಗುತ್ತದೆ. ಮೊದಲೆಲ್ಲ ಹಾಲಿವುಡ್, ಬಾಲಿವುಡ್ ತಾರೆಯರು ಈ ಮೇಕಪ್ ಅನ್ನು ಮಾಡಿಸಿಕೊಳ್ಳುತ್ತಿದ್ದರು. ಜರ್ಮನಿಯಿಂದ ಬಂದ ಈ ಮೇಕಪ್ ತಂತ್ರಜ್ಞಾನ ಬಹುಬೇಗ ಜನಪ್ರಿಯತೆ ಪಡೆದುಕೊಂಡಿದೆ.

‘ಹೈಡೆಫಿನಿಷನ್ ಮೇಕಪ್ ವಾಟರ್ಪ್ರೂಫ್ ಆಗಿದ್ದು, ಮಳೆ ಬರಲಿ, ಬೆವರಿನಿಂದ ತೋಯ್ದುಹೋಗಲಿ, ಹೋಮದ ಮುಂದೆ ಕುಳಿತಾಗ ಹೊಗೆ ತಾಗಿದರೂ ಮೇಕಪ್ ಮಾಸುವುದಿಲ್ಲ, ಅಂದಗೆಡುವುದಿಲ್ಲ, ಬಣ್ಣಗೆಡುವುದಿಲ್ಲ. ಸುಮಾರು 12 ಗಂಟೆಗಳವರೆಗೆ ತಾಜಾತನ ಕಾಪಾಡಿಕೊಂಡು ಬರುತ್ತದೆ’ ಎಂದು ವಿವರ ನೀಡುತ್ತಾರೆ ಬೆಂಗಳೂರಿನ ಸೌಂದರ್ಯತಜ್ಞೆ ಉಮಾ ಜಯಕುಮಾರ್.

‘ಕಣ್ಣುಗಳಿಗೆ ಮಾಡುವ ಐ ಮೇಕಪ್, ಹುಬ್ಬು, ರೆಪ್ಪೆಗಳಿಗೆ ಶೈನಿಂಗ್ ಬರಲು ಶಿಮ್ಮರ್ ಬಳಸಲಾಗುತ್ತದೆ. ಐ ಲ್ಯಾಷಸ್ ಕೂಡ ಕೃತಕವಾಗಿ ತಯಾರಿಸಿದ್ದು ಬಂದಿದೆ. ಇದು ಎಲಿಗೆಂಟ್ ಲುಕ್ ಕೊಡುತ್ತದೆ. ಜೆಲ್ ಐಲೈನರ್ ಲೇಪಿಸಿಕೊಂಡರೆ ಅದು ಸ್ಪ್ರೆಡ್ ಆಗುವ ಆತಂಕವಿಲ್ಲ. ಇನ್ನು ತುಟಿಗಳಿಗೆ ಕೆಂಪು, ಕಿತ್ತಳೆ ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದು ಈಗಿನ ಟ್ರೆಂಡ್’ ಎನ್ನುವುದು ಇವರ ವಿವರಣೆ.

‘ಸಿರಿವಂತರಿಗಾಗಿಯೇ ಏರ್ಬ್ರಷ್ ಮೇಕಪ್ ಹೊಸದಾಗಿ ಬಂದಿದೆ. ಇದು ಎಸಿ ಹಾಲ್ನಲ್ಲಿದ್ದಾಗ ಬಳಸುವಂಥದ್ದು. ಇದು ಬಹಳ ದುಬಾರಿಯಾಗಿದ್ದು, ಹಣವನ್ನು ಧಾರಾಳವಾಗಿ ಖರ್ಚು ಮಾಡುವವರು ಮಾತ್ರ ಮಾಡಿಸಿಕೊಳ್ಳುತ್ತಾರೆ. ಮದುಮಗಳ ಜೊತೆಗೆ ಇವಳ ತಂಗಿಯಂದಿರು, ಮನೆಮಂದಿ ಎಲ್ಲರೂ ಮೇಕಪ್ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗುತ್ತಾರೆ’ ಎಂದು ಹೇಳುತ್ತಾರೆ ಉಮಾ.

ರಾಯಲ್ ಟಚ್ ‘ರಾಣಿಯರ ಕಾಲದ್ದು ಎನ್ನಲಾದ ‘ರಾಯಲ್ ಬ್ರೈಡಲ್ ಮೇಕಪ್’ ಕೂಡ ಇದೀಗ ಮತ್ತೆ ಹೊಸ ಟ್ರೆಂಡ್ ಸೃಷ್ಟಿಸಿದೆ. ನೈಸರ್ಗಿಕ ನೋಟಕ್ಕೆ ಹೆಸರಾದ ಈ ಮೇಕಪ್ ವಧುವಿಗೆ ರಾಯಲ್ ಲುಕ್ ಅನ್ನೇ ಕೊಡುತ್ತದೆ. ವಧುವಿನ ಕಣ್ಣುಗಳು ಆಕರ್ಷಣೆಯ ಕೇಂದ್ರವಾಗಿರುವುದರಿಂದ ಡಾರ್ಕ್ ಕೋಲ್, ಐ ಲೈನರ್ನ ಸ್ಟ್ರೋಕ್, ಕೃತಕ ಐ ಲ್ಯಾಷಸ್ ಮತ್ತು ಐ ಶ್ಯಾಡೊ ವಧುವನ್ನು ಅಪ್ಸರೆಯಂತೆ ಕಂಗೊಳಿಸುತ್ತದೆ. ಇದಕ್ಕೆ ಹೊಂಬಣ್ಣದ ಟಚಪ್ ಕೊಟ್ಟರೆ ಚಿನ್ನದ ಆಭರಣದೊಂದಿಗೆ ಮೇಕಪ್ ಕೂಡ ಪ್ರತಿಬಿಂಬಿಸಿ ಅದ್ದೂರಿ ಸಮಾರಂಭದಲ್ಲಿ ಮದುಮಗಳು ಶೋಭೆ ತರುವುದರಲ್ಲಿ ಸಂಶಯವಿಲ್ಲ.

ಎಲ್ಲ ಮೇಕಪ್ ಮಾಡುವ ಮುನ್ನ ಉತ್ತಮ ಗುಣಮಟ್ಟದ ಪ್ರೈಮರ್ ಹಾಕಿಕೊಂಡರೆ ಅಲರ್ಜಿ ಆಗುವ ಭಯವಿರುವುದಿಲ್ಲ. ರಾಸಾಯನಿಕಗಳಿಂದ ಕೂಡಿದ ಹಾಗೂ ಕಳಪೆ ಗುಣಮಟ್ಟದ ಮೇಕಪ್ ಮಾಡಿಸಿಕೊಳ್ಳುವುದು ಚರ್ಮರೋಗಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ ಮೇಕಪ್ ಮಾಡಿಸಿಕೊಳ್ಳುವಾಗ ಎಚ್ಚರ ವಹಿಸುವುದು ಕೂಡ ಅನಿವಾರ್ಯ. ಇನ್ನೇನು ಮದುವೆ ಸೀಸನ್ ಬಂತು. ಮೇಕಪ್, ಹೇರ್ ಸ್ಟೈಲ್, ಸೀರೆ, ಒಡವೆ.. ಎಲ್ಲದರಲ್ಲೂ ಹೊಸತನದ್ದೇ ಸದ್ದು. ಮೇಕಪ್ ಅಂತೂ ಇಲ್ಲದೇ ಹೋದರೆ ಇಂದಿನ ದಿನಗಳಲ್ಲಿ ಮದುವೆಯೇ ಅಪೂರ್ಣ ಎನಿಸುವಷ್ಟು ಅನಿವಾರ್ಯ ಅಗತ್ಯವಾಗಿದೆ.

ಮೇಕಪ್ಗೆ ತಕ್ಕ ಕೇಶಶೈಲಿ ‘ಮದುವೆಗಳಲ್ಲಿ ಈಗೀಗ ಹೆಚ್ಚಿನವರು ಮೆಸ್ಸಿ ಜಡೆ ಹಾಗೂ ಮೆಸ್ಸಿ ನಾಟ್ ಕೇಶಶೈಲಿಗೆ ಮೊರೆ ಹೋಗುತ್ತಿದ್ದಾರೆ. ಇದಕ್ಕೂ ಮುನ್ನ ಕ್ರಿಂಟಿಂಗ್ ಎಂಬ ಮೆಷಿನ್ ಮೂಲಕ ಕೇಶವನ್ನು ಬ್ಲೆಂಡ್ ಮಾಡಲಾಗುತ್ತದೆ. ಮಲ್ಲಿಗೆ, ಗುಲಾಬಿ ಹೂವುಗಳಿಗೆ ಕಲರ್ ಸ್ಪ್ರೇ ಮಾಡಿ ಮುಡಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.