ಲೇಖಕ ವಸಂತ ಮಳಲಿ ಅವರ ಪುತ್ರಿ ರೂಪಾ ಎಂ.ವಿ. (Roopa MV) ಮೈಸೂರಿನವರು (Mysuru). ಕನ್ನಡ ಸಾಹಿತ್ಯ (Kannada Literature) ಮತ್ತು ವಿಜ್ಞಾನ (Science) ಎರಡರಲ್ಲೂ ಆಸಕ್ತಿ ಹೊಂದಿದ್ದ ರೂಪಾ ಅವರು, ಪ್ರೌಢಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿಯೇ (Kannada Medium) ಓದಿದವರು. ನಂತರ, ಎಂಜಿನಿಯರಿಂಗ್ ಮಾಡಿ, ಹಾಸನದಲ್ಲಿರುವ ಇಸ್ರೊದ ‘ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ’ ಕೇಂದ್ರದಲ್ಲಿ ಅಪ್ರೆಂಟಿಸ್ಷಿಪ್ ಸೇರಿಕೊಂಡ ನಂತರ ಅವರು ತಿರುಗಿ ನೋಡಿಯೇ ಇಲ್ಲ. ಇಸ್ರೊ ವಿಜ್ಞಾನಿ (ISRO Scientist) ಮತ್ತು ತಂತ್ರಜ್ಞಾನಿಯಾಗಿ ಬೆಳೆದ ಅವರು, ಚಂದ್ರಯಾನ–3 ಯೋಜನೆ (Chandrayana) ಉಪನಿರ್ದೇಶಕಿ, ಮಂಗಳಯಾನ (Mangalayana) ಉಪಗ್ರಹ ಕಾರ್ಯಕಾರಿ ನಿರ್ದೇಶಕಿ, ಚಂದ್ರಯಾನ–2 ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ನ ಕಾರ್ಯಕಾರಿ ನಿರ್ದೇಶಕಿ ಸೇರಿದಂತೆ ಹಲವು ಹುದ್ದೆ ನಿಭಾಯಿಸಿದ್ದಾರೆ. ಸದ್ಯ, ಈಗ ನಾವಿಗೇಷನ್ ಸಿಸ್ಟಮ್ ಏರಿಯಾ(ನಾವಿಕ್) ಇದು ಸಮೂಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ರೂಪಾ ಅವರ ಸ್ಫೂರ್ತಿಯ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.