* ನಿಮ್ಮ ಪ್ರಕಾರ ಮಹಿಳಾ ದಿನದ ಪ್ರಸ್ತುತತೆ ಏನು?
ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಎಲ್ಲಾ ರೀತಿಯ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಮಹಿಳೆಯರು ಇಂದು ಹೆಚ್ಚು ಅಧಿಕಾರವನ್ನು ಪಡೆದಿದ್ದು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿದ್ದಾರೆ ಎಂಬುದನ್ನು ಮಹಿಳಾ ದಿನ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ.

ಇದು ಸಮಾಜವು ಸ್ವತಃ ಬದಲಾವಣೆಗೆ ಒಳಪಡುವ ಮೂಲಕ ಮಹಿಳೆಯರ ಒಟ್ಟಾರೆ ಬೆಳವಣಿಗೆಯ ಕಡೆಗೆ ಸಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇದು ಸಮಾಜಕ್ಕೆ ಮಹಿಳೆಯರು ನೀಡುತ್ತಿರುವ ಕೊಡುಗೆಯನ್ನು ಆತ್ಮಾವಲೋಕನ ಮಾಡುವ ಒಂದು ದಿನ ಎಂದು ಹೇಳಬಹುದು. ಈ ದಿನ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಒಂದು ಮಹತ್ವದ ದಿನವಾಗಿದೆ.

* ಐಟಿ ಕ್ಷೇತ್ರದಲ್ಲಿರುವ ನೀವು, ಮಹಿಳಾ ವಿಮೋಚನೆಗೆ ಯಾವ ರೀತಿಯ ಕೊಡುಗೆ ನೀಡುತ್ತೀರಿ?
ಶಿಕ್ಷಣ ಮಹಿಳೆಯರ ವಿಮೋಚನೆಗೆ ಅಗಾಧವಾದ ಕೊಡುಗೆ ನೀಡುತ್ತಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. ವಿದ್ಯಾವಂತ ಮಹಿಳೆ ತನ್ನ ಹಕ್ಕುಗಳ ಬಗ್ಗೆ ಹೆಚ್ಚು ಅರಿವು ಹೊಂದಿದ್ದು, ಆ ಮೂಲಕ ಹೆಚ್ಚಿನ ಅಧಿಕಾರವನ್ನೂ ಪಡೆದಿದ್ದಾಳೆ.

ಕೆಳವರ್ಗಗಳ ಮಕ್ಕಳ ಶಿಕ್ಷಣಕ್ಕೆ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮದೇ ಆದ ಕೊಡುಗೆ ಸಲ್ಲಿಸಲು `ಸ್ಯಾಪ್ ` ತನ್ನ ನೌಕರರಿಗೆ ಅಪಾರ ಅವಕಾಶಗಳನ್ನು ನೀಡುತ್ತಿದೆ. ಈ ಮೂಲಕ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೊಡುಗೆ ನೀಡುವ ಅದೃಷ್ಟ ನನ್ನದಾಗಿದೆ.

*ಐಟಿ ಕ್ಷೇತ್ರದಲ್ಲಿನ ಕೆರಿಯರ್ ಮಹಿಳೆಯ ಕೌಟುಂಬಿಕ ಬದುಕಿನ ಮೇಲೆ ಬೀರುವ ಪರಿಣಾಮ ಎಂತಹದ್ದು?
ಇತರ ಯಾವುದೇ ಉದ್ಯೋಗದಲ್ಲಿ ಇರುವಂತೆ, ಐಟಿ ಕ್ಷೇತ್ರದಲ್ಲಿಯೂ ಅದರದೇ ಆದ ಸವಾಲುಗಳಿವೆ. ಉದ್ಯೋಗಸ್ಥ ಮಹಿಳೆ ಉದ್ಯೋಗ ಹಾಗೂ ಕುಟುಂಬಗಳನ್ನು ನಿರ್ವಹಿಸಲೇ ಬೇಕು. ಹೆಚ್ಚಿನ ಐಟಿ ಕಂಪೆನಿಗಳಿಗೆ ಈ ಬಗ್ಗೆ ಅರಿವಿದೆ.

ಹೀಗಾಗಿಯೇ ಈ ದ್ವಿಪಾತ್ರಗಳಲ್ಲಿ ಸಮತೋಲನ ಸಾಧಿಸಲು ಮಹಿಳೆಗೆ ಗಣನೀಯವಾದ ಬೆಂಬಲ ಹಾಗೂ ಉತ್ತೇಜನಗಳನ್ನು ಐಟಿ ಕಂಪೆನಿಗಳು ನೀಡುತ್ತಿವೆ. ಉದ್ಯೋಗದಾತರ ಬೆಂಬಲ ಹಾಗೂ ಪ್ರೋತ್ಸಾಹಗಳ ಜೊತೆಗೇ ಕುಟುಂಬದ ಸಹಕಾರವೂ ಇದ್ದಲ್ಲಿ ತಮ್ಮ ಪಾತ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ಯೋಗಸ್ಥ ಮಹಿಳೆಗೆ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.