ನಮಗೆ ಯಾವಾಗಲು ಸಿಹಿ ಪದಾರ್ಥಗಳನ್ನು ವಿಶಿಷ್ಟವಾಗಿ ಸಕ್ಕರೆಯಿಂದ ತಯಾರಿಸಿದ ಸಿಹಿ ತಿನಿಸುಗಳು ಬಹು ಪ್ರಿಯವಾಗಿರುತ್ತದೆ. ನಾವು ದೇಹದಲ್ಲಿ ಸಕ್ಕರೆಯ ಕ್ರಿಯಾಶಕ್ತಿಯನ್ನು ತಿಳಿದುಕೊಳ್ಳೋಣ. ನಮ್ಮ ದೇಹವು ಸಕ್ಕರೆ (ಗ್ಲೂಕೋಸ್) ಯನ್ನು ಜೀರ್ಣಿಸಿ ರಕ್ತಗತ ಮಾಡಿಕೊಳ್ಳೂವ ಮುನ್ನ ಎರಡು ರೀತಿಯಲ್ಲಿ ವಿಸ್ತರಿಸುತ್ತದೆ - ಗ್ಲೂಕೋಸ್ (glucose) ಮತ್ತು ಫ್ರಕ್ಟೋಸ್ (fructose).

ಜೀವಕಣಗಳಿಗೆ ಗ್ಲೂಕೋಸ್ ಅಗತ್ಯ ಇದೆ. ನಾವು ಆಹಾರದಲ್ಲಿ ಸೇವಿಸದಿದ್ದರೂ ದೇಹವು ಸ್ವಂತ ಉತ್ಪನ್ನ ಮಾಡಿಕೊಳ್ಳುತ್ತದೆ. ಫ್ರಕ್ಟೋಸ್ ದೇಹದಲ್ಲಿ ಸಹಜವಾಗಿ ಉತ್ಪನ್ನ ಆಗದಿದ್ದ ಕಾರಣ, ಇದು ಇಲ್ಲದೆಯೂ ಸಹ ದೇಹದಲ್ಲಿ ಏನು ತೂಂದರೆ ಆಗುವುದಿಲ್ಲ್ಲ. ಆದರೆ ಫ್ರಕ್ಟೋಸ್ ವ್ಯಾಯಾಮ ಮಾಡಿ ದೇಹಕ್ಕೆ ಉಪಯುಕ್ತ ಆಗದಿದ್ದ ಕಾರಣ ಗ್ಲೈಕೋಜನ್ ಆಗಿ ಲಿವರ್‌ನಲ್ಲಿ ಶೇಖರಣೆ ಆಗುತ್ತದೆ. ಹೆಚ್ಚಿನ ಪ್ರಮಾಣದ ಗ್ಲೈಕೊಜೆನ್ ಕೆಟ್ಟ ಕೊಲೆಸ್ಟ್ರಾಲ್‌ಗೆ ಪರಿವರ್ತನೆಯಾಗಿ ಹೃದಯ ರೋಗ, ಬೊಜ್ಜು, ಮಧುಮೇಹ ಮುಂತಾದ ರೋಗಗಳನ್ನು ಹುಟ್ಟು ಹಾಕುತ್ತದೆ.

*ಕಾರಣ 1
ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳಿದ್ದು ಅದರಲ್ಲಿ ಯಾವುದೇ ತರಹದ ಉಪಯುಕ್ತವಾದ ಪೌಷ್ಟಿಕಾಂಶಗಳು ಸಿಗುವುದಿಲ್ಲ.
ಸಕ್ಕರೆಯು ತಾತ್ಕಾಲಿಕವಾಗಿ ವಿಶೇಷ ಶಕ್ತಿಯನ್ನು ನೀಡುತ್ತದೆ. ಸ್ವಲ್ಪ ಸಮಯದ ನಂತರ ಮತ್ತಷ್ಟು ಸಕ್ಕರೆ ತಿನ್ನುವ ಹಂಬಲ ಅಥವ ಬಯಕೆಯನ್ನು ಹೆಚ್ಚಿಸುತ್ತದೆ. ಬಾಯಿಯಲ್ಲಿರುವ ಕೀಟಾಣುಗಳಿಗೆ ಸಕ್ಕರೆಯು ಬಹಳ ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ವಸಡು, ಹಲ್ಲುಗಳು ಹಾಳಾಗುವುದು, ಬಾಯಿಯಲ್ಲಿ ದುರ್ಗಂಧ ಮುಂತಾದುವುಗಳಿಗೆ ಕಾರಣವಾಗುತ್ತದೆ. ಸಿಹಿ ಪದಾರ್ಥಗಳು ತಿಂದ ನಂತರ ಹಲ್ಲು ಉಜ್ಜುವುದನ್ನು ಮರೆಯಬಾರದು.

*ಕಾರಣ 2
ಲಿವರ್‌ನ ಮೇಲೆ ಮಿತಿಮೀರಿದ ಒತ್ತಡವನ್ನು ಹಾಕುತ್ತದೆ. ನಮ್ಮ ಅಗತ್ಯಗಿಂತ ಹೆಚ್ಚು ಕ್ಯಾಲೊರಿ ನಾವು ದಿನ ನಿತ್ಯ ತಿನ್ನುವ ಆಹಾರದಲ್ಲಿ ಇದ್ದು ಅದನ್ನು ನಾವು ಉಪಯೋಗಿಸದೆ ಇದ್ದಲಿ ಲಿವರ್ ನ ಮೇಲೆ ಮಿತಿಮೀರಿದ ಒತ್ತಡವಾಗುತ್ತದೆ. ನಮ್ಮ ದೇಹಕ್ಕೆ ಫ್ರಕ್ಟೋಸ್ (fructose) ನ ಅಗತ್ಯ ಇರುವುದಿಲ್ಲ. ಮಿತಿ ಮೀರಿದ ಫ್ರಕ್ಟೋಸ್ ಉತ್ಪನ್ನವಾದಾಗ ಲಿವರ್ ನಲ್ಲಿ ಗ್ಲೈಕೋಜನ್ ಆಗಿ ಸಂಗ್ರಹವಾಗುತ್ತದೆ. ಈ ಸಂಗ್ರಹಕ್ಕಿಂತ ಹೆಚ್ಚು ಗ್ಲೈಕೋಜನ್ ಪ್ರಮಾಣವಾದರೆ ಅದು ಕೊಬ್ಬಿನ ಅಂಶಕ್ಕೆ ಪರಿವರ್ತನೆ ಹೊಂದುತ್ತದೆ (non alcoholic fatty liver).

*ಕಾರಣ 3
ಆಹಾರದಲ್ಲಿ ಉಪ್ಪು ಹೆಚ್ಚು ಉಪಯೋಗಿಸಿದರೆ ಮಾತ್ರ ರಕ್ತ ಒತ್ತಡ ಹೆಚ್ಚಾಗಿ ಹೃದಯ ರೋಗಗಳು ಬರಬಹುದೆಂಬ ಸಾಧ್ಯತೆ ಇದೆ ಎಂದು ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ಹೆಚ್ಚಿನ ಸಕ್ಕರೆ ಅಂಶವು ಲಿವರ್‌ನಲ್ಲಿ ಕೊಬ್ಬಿನ (cholesterol) ರೀತಿಯಲ್ಲಿ ಸಂಗ್ರಹವಾಗುತ್ತದೆ. ನಂತರ ಕೆಟ್ಟ ಕೊಲೆಸ್ಟಿರಾಲ್ ಹೆಚ್ಚಿನ ಅಂಶದಲ್ಲಿ ಸೇರಿ ಹೃದಯ ಅಪಧಮನಿ (artery)ಗಳಲ್ಲಿ ರಕ್ತ ಚಲನೆಯನ್ನು ಕಡಿಮೆಯಾಗಿಸಿ ಬ್ಲಾಕ್ ಮಾಡುತ್ತದೆ. ಹೀಗೆ ಹೃದಯ ರೋಗಗಳು ಉದ್ಭವಿಸುತ್ತದೆ. ಸಕ್ಕರೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು

*ಕಾರಣ 4
ನಾವು ಕರಿದ ಪದಾರ್ಥಗಳನ್ನು ಅಥವ ಜಂಕ್ ಆಹಾರಗಳ ಸೇವಿಸುವುದರಿಂದ ಮಾತ್ರ ಬೊಜ್ಜು ಬರುವುದಿಲ್ಲ. ಚಾಕಲೇಟ್, ಮಿಲ್ಕ್ ಶೇಕ್, ಐಸ್ ಕ್ರೀಮ್, ಪೇಸ್ಟ್ರೀಸ್, ಕೇಕ್ ಮುಂತಾದ ಸಕ್ಕರೆ ಭರಿತ ತಿನಿಸುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳು ಹೆಚ್ಚಾಗಿ ದೇಹದ ತೂಕ ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿನ ಫ್ರಕ್ಟೋಸ್ ಅಂಶ ಸೇರಿದಾಗ ನಾವು ಲೆಪ್ಟಿನ್ ರೆಸಿಸ್ಟೆಂಟ್ (leptin resistant) ಆಗುತ್ತೇವೆ.

‘ಲೆಪ್ಟಿನ್’ ಎಂಬುದು ಒಂದು ಹಾರ್ಮೋನ್. ನಾವು ಊಟ ಮಾಡಿ ಹೊಟ್ಟೆ ತುಂಬಿದ ನಂತರ ಮೆದುಳಿಗೆ ತೃಪ್ತಿಯ ಸಂಕೇತವನ್ನು ನೀಡುತ್ತದೆ. ಆಗ ನಾವು ತಿನ್ನುವುದನ್ನು ನಿಲ್ಲಿಸುತ್ತೇವೆ. ಇದು ನಮ್ಮ ದೇಹದಲ್ಲಿ ಸಹಜವಾಗಿ ನಡೆಯುವ ಕ್ರಿಯೆ. ಹೆಚ್ಚಿನ ಅಂಶದಲ್ಲಿ ಸಕ್ಕರೆಯ ಪದಾರ್ಥಗಳನ್ನು ಯಾವುದೆ ರೀತಿಯಲ್ಲಿ ತಿಂದಾಗ ನಮ್ಮ ದೇಹವು ‘ಲೆಪ್ಟಿನ್ ರೆಸಿಸ್ಟೆಂಟ್’ ಆಗ ಮೆದುಳಿಗೆ ಊಟದ ತೃಪ್ತಿಯ ಸಂಕೇತ ಹೋಗದೆ ನಾವು ಮಿತಿ ಮೀರಿ ತಿಂದು ದೇಹದ ತೂಕವು ಹೆಚ್ಚಾಗುತ್ತದೆ.

*ಕಾರಣ 5
ಇನ್ಸುಲಿನ್ ನಿರೋಧಕ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಸಕ್ಕರೆ ಅಂಶದಿಂದ ಇನ್ಸುಲಿನ್ ನಿರೋಧಕ ಗುಣ ಬೆಳೆಯುತ್ತದೆ. ಇನ್ ಸುಲಿನ್ ಎಂಬ ಹಾರ್ಮೋನ್ ಜೀವ ಕಣಗಳಿಗೆ ಗ್ಲೂಕೋಸ್ ಹೀರಿಕೊಂಡು ದೇಹಕ್ಕೆ ಶಕ್ತಿ ಕೊಡಲು ಸಂಕೇತ ಮಾಡುತ್ತದೆ. ಜೀವ ಕಣಗಳು insulin resistant ಆದಾಗ ಗ್ಲೂಕೋಸ್, ಅಮೈನೊ ಆಸಿಡ್ ಹಾಗು ಉಪಯುಕ್ತವಾದ ಫ್ಯಾಟಿ ಆಸಿಡ್‌ಗಳು ಜೀವ ಕಣಗಳಿಂದ ಹೊರಹಾಕುತ್ತದೆ. ಆಗ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಇರುತ್ತದೆ.

*ಕಾರಣ 6
ಅಕಾಲಿಕ ವಯಸ್ಸಾಗುತ್ತದೆ. ಸಕ್ಕರೆ ಅಂಶ ಹೆಚ್ಚು ಸೇವಿಸಿದ್ದಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗುತ್ತದೆ. ಚರ್ಮದಲ್ಲಿ ಸುಕ್ಕುಗಳು, ಬಾಲ ನೆರೆ, ಸ್ನಾಯು ದೌರ್ಬಲ್ಯ, ಅಸಹಜವಾದ ನೋವು, ಕೂದಲು ಉದುರುವಿಕೆ ಮುಂತಾದ ಲಕ್ಷಣಗಳು ಕಾಣಿಸಲಾರಂಭಿಸುತ್ತದೆ. ನೆನಪಿನ ಶಕ್ತಿಯನ್ನು ಸಹ ಕಡಿಮೆ ಮಾಡುತ್ತದೆ.

ಈ ಮೇಲೆ ವಿವರಿಸಿರುವ ಹಲವಾರು ಕಾರಣಗಳಿಂದ ಸಕ್ಕರೆಯ ಬದಲಾಗಿ ಬೆಲ್ಲ ಜೆನು ತುಪ್ಪ ಬಳಸುವುದು ಉತ್ತಮ. ಬಿಸ್ಕತ್ತು, ಸಕ್ಕರೆಯಿಂದ ತಯಾರಿಸಿದ ಸಿಹಿ ತಿನಿಸುಗಳು, ಕರೆದ ಪದಾರ್ಥಗಳನ್ನು ತಿನ್ನದೆ ಪೌಷ್ಟಿಕವಾದ ಆಹಾರ ಸೇವಿಸಿ ಆರೋಗ್ಯದಿಂದ ಇರಬೇಕು. ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಮುದ್ರಿಸಿರುವ ವಿವರಗಳನ್ನು ಓದಿ ನಮಗೆ ಬೇಕಾದ್ದನ್ನು ಕೊಂಡುಕೊಳ್ಳಬೇಕು. ಸಕ್ರಿಯವಾದ ಜೀವನವನ್ನು ಅಳವಡಿಸುವುದು ಉತ್ತಮ.

ಮಾಹಿತಿಗೆ: 9880918603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.