ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪನ್‌ ಫೈರಿಂಗ್‌: ರಷ್ಯಾ ಸೇನಾ ನೆಲೆಯಲ್ಲಿ 11 ಸಾವು

Last Updated 16 ಅಕ್ಟೋಬರ್ 2022, 2:32 IST
ಅಕ್ಷರ ಗಾತ್ರ

ಮಾಸ್ಕೊ: ಸೋವಿಯತ್‌ ರಾಜ್ಯದ ಇಬ್ಬರು ಮಾಜಿ ನಾಗರಿಕರು ಇಲ್ಲಿನ ಉಕ್ರೇನ್‌ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸೇನಾ ತರಬೇತಿ ಕೇಂದ್ರದಲ್ಲಿ ಓಪನ್‌ ಫೈರ್‌ ಮಾಡಿರುವ ಪರಿಣಾಮವಾಗಿ 11 ಜನ ಮೃತಪಟ್ಟಿದ್ದು, ಪ್ರತಿದಾಳಿಯಲ್ಲಿ ಫೈರಿಂಗ್‌ ಮಾಡಿದ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ.

ರಷ್ಯಾ ಇದನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ್ದು, ಘಟನೆಯಲ್ಲಿ ಕನಿಷ್ಠ 15 ಜನ ಗಾಯಗೊಂಡಿದ್ದಾರೆ. ‌ಶನಿವಾರ ಬೆಲ್‌ಗರ್ದ್‌ನಲ್ಲಿರುವ ಸೇನಾ ತರಬೇತು ಕೇಂದ್ರದಲ್ಲಿ ಈ ದಾಳಿ ನಡೆದಿದೆ. ಇಬ್ಬರು ರಷ್ಯಾದ ಭಾಗವಾದ ಸಿಐಎಸ್‌ಗೆ ಸೇರಿದವರು. ಉಕ್ರೇನ್‌ ಮೇಲಿನ ವಿಶೇಷ ಸೇನಾ ಕಾರ್ಯಾಚರಣೆಗಾಗಿ ತರಬೇತಿ ನಡೆಯುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 21 ರಂದು ಸೇನೆಯಲ್ಲಿ ಭಾಗಶಃ ಕಡ್ಡಾಯ ಸೇವೆ ಘೋಷಣೆ ನಂತರ 200,000ಕ್ಕೂ ಹೆಚ್ಚು ಜನ ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ. ಕರಡು ಹಂತದಲ್ಲಿರುವ ಈ ನೀತಿಗೆ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಕೆಲ ನೇಮಕಾತಿ ಕೇಂದ್ರಗಳ ಮೇಲೆ ಸಾರ್ವಜನಿಕರಿಂದ ದಾಳಿ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT