ಶುಕ್ರವಾರ, ಜನವರಿ 22, 2021
23 °C

ಅಮೆರಿಕದಲ್ಲಿ ದೋಣಿ ಕಣ್ಮರೆ: 20 ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದಲ್ಲಿ ದೋಣಿಯೊಂದು ಕಣ್ಮರೆಯಾಗಿ 20 ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಶನಿವಾರ ಪ್ರಕಟಿಸಿದೆ.

ಕಳೆದ ಭಾನುವಾರ ಪ್ಲೋರಿಡಾ ಕರಾವಳಿ ತೀರದಿಂದ ಬಹಮಾಸ್‌ ಕಡೆಗೆ ದೋಣಿ ಪ್ರಯಾಣ ಬೆಳೆಸಿತ್ತು. ದೋಣಿಯಲ್ಲಿ 20 ಜನರು ಇದ್ದರು. ಆದರೆ ದೋಣಿ ಹೊರಟ ಸ್ಥಳದಿಂದ 130 ಕೀ. ಮೀಟರ್‌ದಲ್ಲಿ ಕಣ್ಣರೆಯಾಗಿತ್ತು ಎಂದು ಅಮೆರಿಕದ ನೌಕ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ದೋಣಿ ಪತ್ತೆಗೆ ನೌಕಪಡೆ 44,000 ಚ. ಕಿ.ಮೀಟರ್ ವ್ಯಾಪ್ತಿಯಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸಿತ್ತು. ಆದರೆ ದೋಣಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ದೋಣಿ ಪತ್ತೆ ಕಾರ್ಯಾ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ.

ದೋಣಿ ಕಣ್ಮರೆಯಾಗಿದ್ದು ಅದರಲ್ಲಿ ಇದ್ದ 20 ಜನರು ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು