ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

Last Updated 14 ನವೆಂಬರ್ 2022, 9:47 IST
ಅಕ್ಷರ ಗಾತ್ರ

ಟೋಕಿಯೊ: ಸೋಮವಾರ ಜಪಾನ್ ಕೇಂದ್ರ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಟೋಕಿಯೊ ಸೇರಿದಂತೆ ಇತರೆ ನಗರಗಳಲ್ಲಿ ಕಂಪನದ ಅನುಭವವಾಗಿದೆ.

ಜಪಾನ್ ಕಾಲಮಾನ ಸಂಜೆ 5 ಗಂಟೆ ಸುಮಾರಿಗೆ ಆಗ್ನೇಯ ಭಾಗದ ಟೋಬಾದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಸಂಸ್ಥೆ ತಿಳಿಸಿದೆ.

ಸಾರ್ವಜನಿಕ ಸುದ್ದಿವಾಹಿನಿ ಎನ್‌ಎಚ್‌ಕೆ ಪ್ರಕಾರ, ಫುಕುಶಿಮಾ ಪರಮಾಣು ಸ್ಥಾವರಗಳಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ವರದಿ ಆಗಿಲ್ಲ.

ಅಮೆರಿಕದ ಭೌಗೋಳಿಕ ಸಮೀಕ್ಷಾ ಸಂಸ್ಥೆಯು ಸಹ 6.1 ತೀವ್ರತೆಯ ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿದೆ.

ಭೂಕಂಪನದ ಕೇಂದ್ರದಿಂದ ನೂರಾರು ಕಿ.ಮೀ ದೂರದಲ್ಲಿದ್ದರೂ ಸಹ ಫುಕುಶಿಮಾ ಮತ್ತು ಇಬರಾಕಿ ಪ್ರಾಂತ್ಯಗಳು, ಉತ್ತರ ಟೋಕಿಯೊದಲ್ಲಿ ಭಾರಿ ಪ್ರಮಾಣದ ಅಲುಗಾಡಿದ ಅನುಭವವಾಗಿದೆ. ಆದರೆ, ಈವರೆಗೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.

ಭೂಕಂಪದ ನಂತರ ಶಿಂಕನ್‌ಸೆನ್ ಬುಲೆಟ್ ರೈಲುಗಳು ಮತ್ತು ಟೋಕಿಯೊ ಮೆಟ್ರೋವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿ, ನಂತರ ಪುನರಾರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT