ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟಿ: ಸುನಾಮಿ ಭೀತಿಯ ನಡುವೆ ಭೂಕಂಪ

Last Updated 14 ಆಗಸ್ಟ್ 2021, 15:33 IST
ಅಕ್ಷರ ಗಾತ್ರ

ಪೋರ್ಟ್–ಔ– ಪ್ರಿನ್ಸ್‌: ‘ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ’ ಎಂದು ಯುಎಸ್ ಜಿಯಾಲಾಜಿಕ್ ಸರ್ವೆ ತಿಳಿಸಿದೆ.

ಭೂಕಂಪದ ಕೇಂದ್ರಬಿಂದು ಸೇಂಟ್ ಲೂಯಿಸ್ ಸೂದ್‌ನಿಂದ ಈಶಾನ್ಯಕ್ಕೆ 12 ಕಿ.ಮೀ. ದೂರದ ಪ್ರದೇಶವೆಂದು ಗುರುತಿಸಲಾಗಿದೆ.

ರಾಜಧಾನಿ ಪೋರ್ಟ್–ಔ–ಪ್ರಿನ್ಸ್‌ನ ಜನರು ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ಏಕಾಏಕಿ ಭೂಮಿ ಕಂಪಿಸಿದ್ದರಿಂದ ಅನೇಕರು ಭಯಭೀತರಾಗಿ ಮನೆಗಳಿಂದ ಹೊರಬಂದರು.

‘ಹಾಸಿಗೆಯಲ್ಲಿ ಮಲಗಿದ್ದ ನನಗೆ ಇದ್ದಕ್ಕಿದ್ದಂತೆ ಭೂಮಿ ನಡುಗಿದ್ದರ ಅನುಭವವಾಯಿತು. 2010ರಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ನಮ್ಮ ಕುಟುಂಬ ಬದುಕುಳಿದಿದೆ. ತಕ್ಷಣವೇ ಮನೆಬಿಟ್ಟು ಹೊರಬಂದೆ. ಮನೆಯೊಳಗೆ ತಾಯಿ ಮತ್ತು ನನ್ನ ಇಬ್ಬರು ಮಕ್ಕಳು ಇರುವುದು ನೆನಪಾಯಿತು. ಪಕ್ಕದ ಮನೆಯವರು ಅವರಿಗೆ ಮನೆಯಿಂದ ಹೊರಬರಲು ಹೇಳಿದರು. ಎಲ್ಲರೂ ಹೊರಬಂದು ಬೀದಿಯತ್ತ ಓಡಿದೆವು’ ಎಂದು ಸ್ಥಳೀಯ ನಿವಾಸಿ ನಯೋಮಿ ವೆರ್ನಿಯಸ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT