ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟ, 11 ಮಂದಿ ಸಾವು

Last Updated 6 ಜೂನ್ 2021, 11:27 IST
ಅಕ್ಷರ ಗಾತ್ರ

ಕಾಬೂಲ್: ವಾಯವ್ಯ ಆಫ್ಗಾನಿಸ್ತಾನದಲ್ಲಿ ರಸ್ತೆ ಬದಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ 11 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿನಿವ್ಯಾನ್‌ ಕಂದಕಕ್ಕೆ ಉರುಳಿದ್ದು, ಬಳಿಕ ಸ್ಫೋಟಗೊಂಡಿತು. ಶವಗಳನ್ನು ಹೊರತೆಗೆಯುವ ಪ್ರಕ್ರಿಯೆ ನಡೆದಿದೆ ಎಂದು ಬಾದ್ಗಿ ಪ್ರಾಂತ್ಯದ ಗವರ್ನರ್‌ ಹೆಸಮುದ್ದೀನ್‌ ಶಾಮ್ಸ್ ಹೇಳಿದರು.

ಕೃತ್ಯದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಬಾದ್ಗಿ ಪ್ರಾಂತ್ಯ ಸರ್ಕಾರವು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ತಾಲಿಬಾನ್ ಸಂಘಟನೆ ಬಾಂಬ್ ಅನ್ನು ವ್ಯಾನ್‌ನಲ್ಲಿ ಇರಿಸಿತ್ತು ಎಂದು ಆರೋಪಿಸಿದೆ.

ಯುದ್ಧಪೀಡಿತ ಆಫ್ಗಾನಿಸ್ತಾನದಲ್ಲಿ ಬಾಂಬ್‌ ಸ್ಫೋಟ ಪ್ರಕರಣ ಸಾಮಾನ್ಯ. ಸರ್ಕಾರದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಇಂಥ ಕೃತ್ಯ ನಡೆಯುತ್ತಿದ್ದು, ಆಗಾಗ್ಗೆ ನಾಗರಿಕರು ಇದಕ್ಕೆ ಬಲಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT