ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ಸಂಘರ್ಷ: 40 ಸಾವಿರಕ್ಕೂ ಹೆಚ್ಚು ಗಾಯಾಳುಗಳಿಗೆ ರೆಡ್‌ಕ್ರಾಸ್ ಚಿಕಿತ್ಸೆ

Last Updated 17 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಜಿನೀವಾ: ತಾಲಿಬಾನ್‌ ಪಡೆ ಮತ್ತು ಅಫ್ಗನ್‌ ಸಂಘರ್ಷದಲ್ಲಿ ಗಾಯಗೊಂಡ 40 ಸಾವಿರಕ್ಕೂ ಹೆಚ್ಚು ಜನರಿಗೆ ಜೂನ್‌ನಿಂದ ಇಲ್ಲಿಯವರೆಗೆ ಚಿಕಿತ್ಸೆ ನೀಡಲಾಗಿದೆ ಎಂದು ರೆಡ್‌ಕ್ರಾಸ್‌ ಅಂತರರಾಷ್ಟ್ರೀಯ ಸಮಿತಿ (ಐಸಿಆರ್‌ಸಿ) ತಿಳಿಸಿದೆ.

ಆಗಸ್ಟ್‌ನ ಮೊದಲ ಹತ್ತು ದಿನಗಳಲ್ಲಿ, 4,042 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ತಾಲಿಬಾನ್‌ ಪಡೆಯು ಸಂಘರ್ಷವಿ‌ಲ್ಲದೇ ಕಾಬೂಲ್‌ ಅನ್ನು ವಶಪಡಿಸಿಕೊಳ್ಳುವುದಕ್ಕಿಂತ ಮೊದಲಿನ ವಾರದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದಿರುವ ಐಸಿಆರ್‌ಸಿ ಮಹಾನಿರ್ದೇಶಕ ರಾಬರ್ಟ್‌ ಮರ್ದಿನಿ, ಕಾಬೂಲ್‌ನಲ್ಲಿ ರಕ್ತಪಾತ ತಪ್ಪಿದ್ದಕ್ಕೆ ಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

‘ತಿಂಗಳುಗಳಿಂದ, ವರ್ಷಗಳಿಂದ ನಮ್ಮ ವೈದ್ಯಕೀಯ ತಂಡಗಳು, ಪುನರ್ವಸತಿ ಕೇಂದ್ರಗಳು ಸ್ಫೋಟದಲ್ಲಿ ಗಾಯಗೊಂಡಿರುವವರನ್ನು ನೋಡುತ್ತಲೇ ಬಂದಿದ್ದು, ಅವರಲ್ಲಿ ಕೆಲವರು ಕೆಲವು ವಾರಗಳ ಹಿಂದಷ್ಟೇ ಚೇತರಿಸಿಕೊಂಡಿದ್ದಾರೆ. ಕಾಲು ಕಳೆದುಕೊಂಡ ಮಕ್ಕಳು, ತರುಣರು, ಮಹಿಳೆಯರಿಂದ ತುಂಬಿದ ವಾರ್ಡ್‌ಗಳನ್ನು ನೋಡಿದಾಗ ಹೃದಯ ಒಡೆದುಹೋಗುತ್ತದೆ’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ 1987ರಿಂದಲೂ ಕಾರ್ಯನಿರ್ವಹಿಸುತ್ತಿರುವ ರೆಡ್‌ಕ್ರಾಸ್, ಶಸ್ತ್ರಚಿಕಿತ್ಸಕರೂ ಸೇರಿದಂತೆ ಅಂದಾಜು  1,800 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಿದೆ ಎಂದು ಐಸಿಆರ್‌ಸಿ ವಕ್ತಾರರಾದ ಫ್ಲೋರಿನಾ ಸೆರಿಕ್ಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT