ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಾಂಕ್ರಾಮಿಕಕ್ಕೆ ಒಂದು ವರ್ಷ: ಲಸಿಕೆಯಿಂದ ಜನರಲ್ಲಿ ಒಂದಿಷ್ಟು ಹರ್ಷ

Last Updated 10 ಮಾರ್ಚ್ 2021, 8:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಪಿ): ಮಲಗಿದ್ದ ಮಿಚಿಗನ್‌ ಮಹಿಳೆಯೊಬ್ಬರು ಏಳಲಿಲ್ಲ, ಪಕ್ಕದಲ್ಲಿಯೇ ಇದ್ದ ಪತ್ನಿ ಕಣ್ಣುಮುಚ್ಚಿದ್ದರು, ಮನೆಯ ಕೆಲಸಗಾರರಿಗೆ ಜೀವನ ನಡೆಸುವುದೇ ಕಷ್ಟಕರವಾಯಿತು, ವಿದ್ಯಾರ್ಥಿಗಳಿಗೆ ಶಾಲೆಗಳು ಬಾಗಿಲು ಮುಚ್ಚಿದವು... ವಾರದ ನಂತರ ಶಾಲೆಗಳು ಆರಂಭವಾಗಬಹುದು ಎಂದುಕೊಂಡಿದ್ದ ಮಕ್ಕಳಿಗೆ ಶಾಲೆಗಳ ಬಾಗಿಲು ತೆರೆಯಲು ವರ್ಷವೇ ಬೇಕಾಯಿತು!

2020ರ ಮಾರ್ಚ್‌ 11ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌–19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತು. ಅದಕ್ಕೀಗ ವರ್ಷ ತುಂಬಿದೆ. ಈ ಅವಧಿಯಲ್ಲಿ ಜನರು ಎದುರಿಸಿದ ಕಷ್ಟಕರ ದಿನಗಳು ಅಷ್ಟಿಷ್ಟಲ್ಲ.

ವರ್ಷದ ನಂತರ ಕೆಲವರು ಸಾಮಾನ್ಯ ಸ್ಥಿತಿಗೆ ಮರಳುವ ಕನಸು ಕಾಣುತ್ತಿದ್ದಾರೆ. ಲಸಿಕೆಗಳು ಬಂದಿರುವುದು ಇದಕ್ಕೆ ಕಾರಣ. ಈ ಸಮಯದಲ್ಲಿ ಜನರು ಒಂದು ವರ್ಷ ಹೇಗೆ ಕಳೆದೆವು ಎಂಬುದನ್ನು ಅವಲೋಕನ ಮಾಡಿಕೊಳ್ಳುತ್ತಿದ್ದಾರೆ.

2020 ಮಾರ್ಚ್‌ 11ರಂದು 1.25 ಲಕ್ಷ ಕೋವಿಡ್‌–19 ಪ್ರಕರಣಗಳು ದೃಢವಾಗಿದ್ದವು ಮತ್ತು 5000ಕ್ಕಿಂತ ಕಡಿಮೆ ಸಾವುಗಳು ವರದಿಯಾಗಿದ್ದವು. ಆದರೆ ಇಂದು ಪ್ರಕರಣಗಳ ಸಂಖ್ಯೆ 11.78 ಕೋಟಿ ದಾಟಿದ್ದರೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26.14 ಲಕ್ಷ ದಾಟಿದೆ.

ಆ ದಿನ, ಇಟಲಿಯಲ್ಲಿ ವರದಿಯಾಗಿದ್ದ 10,000 ಸೋಂಕುಗಳ ಹಿನ್ನೆಲೆಯಲ್ಲಿ ಅಂಗಡಿ, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಯಿತು. ಅಂದು ಸಂಜೆ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಯುರೋಪಿನಿಂದ ಪ್ರಯಾಣಕ್ಕೆ ನಿರ್ಬಂಧಗಳನ್ನು ಘೋಷಿಸಿದ್ದರು.

ಜಗತ್ತಿನ ಇತರ ಭಾಗಗಳು ಇನ್ನೂ ಅಷ್ಟಾಗಿ ಕೋವಿಡ್‌ನಿಂದ ತತ್ತರಿಸಿರಲಿಲ್ಲ. ಆದರೆ ಭಾರತ ಸಹಿತ ವಿಶ್ವದ ಅನೇಕ ರಾಷ್ಟ್ರಗಳು ಮಾರ್ಚ್‌ ಮೂರನೇ ವಾರದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT