ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ಗೆ ಮಾರ್ಗದರ್ಶನ: ಅಮೆರಿಕಕ್ಕೆ ಚೀನಾ ಸಲಹೆ

Last Updated 30 ಆಗಸ್ಟ್ 2021, 19:43 IST
ಅಕ್ಷರ ಗಾತ್ರ

ಬೀಜಿಂಗ್‌: ಅಫ್ಗಾನಿಸ್ತಾನದ ಪರಿಸ್ಥಿತಿ ಮೂಲಭೂತವಾಗಿ ಬದಲಾಗುತ್ತಿದೆ. ಎಲ್ಲಾ ದೇಶಗಳೂ ತಾಲಿಬಾನ್‌ ಅನ್ನು ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಚೀನಾ ಅಮೆರಿಕಕ್ಕೆ ಹೇಳಿದೆ.

ಆ.31ರ ಗಡುವಿನ ಒಳಗೆ ಆಫ್ಗನ್‌ ನಾಗರಿಕರನ್ನು ಮತ್ತು ರಾಯಭಾರಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಅಮೆರಿಕ ಮತ್ತು ನ್ಯಾಟೊ ಪಡೆಗಳು ನಿರತವಾಗಿವೆ. ಐ.ಎಸ್‌ ದಾಳಿ ಮತ್ತು ಇತರ ಕಾರಣಗಳಿಂದಾಗಿ ಅಫ್ಗಾನಿಸ್ತಾನದ ಪರಿಸ್ಥಿತಿ ಹದಗೆಡುತ್ತಿದೆ. ಇದರ ನಡುವೆಯೇ, ಅಮೆರಿಕದ ಗೃಹ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಜೊತೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ದೂರವಾಣಿ ಮೂಲಕ ಭಾನುವಾರ ಚರ್ಚೆ ನಡೆಸಿದರು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆಫ್ಗಾನಿಸ್ತಾನಕ್ಕೆ ತುರ್ತಾಗಿ ಆರ್ಥಿಕ, ಮಾನವೀಯ ನೆರವು ನೀಡಲು ಅಮೆರಿಕ ಇತರ ರಾಷ್ಟ್ರಗಳ ಜೊತೆ ಕೆಲಸ ಮಾಡಬೇಕು. ಸಹಜವಾಗಿ ಆಡಳಿತ ನಡೆಸಲು, ಸಾಮಾಜಿಕ ಭದ್ರತೆ ಮತ್ತು ಸ್ಥಿರತೆ ನೀಡಲು, ಹಣದುಬ್ಬರ ತಗ್ಗಿಸುವ ದಿಸೆಯಲ್ಲಿ ಅಫ್ಗಾನಿಸ್ತಾನದ ಹೊಸ ರಾಜಕೀಯ ರಚನೆಗೆ ನೆರವು ನೀಡಬೇಕು ಎಂದು ವಾಂಗ್‌ ಹೇಳಿದ್ದಾರೆ.

ಆಫ್ಗಾನಿಸ್ತಾನದಲ್ಲಿ ಉಗ್ರರನ್ನು ಮಟ್ಟಹಾಕುವ ಗುರಿ ಇಟ್ಟುಕೊಂಡು ನಡೆಸಲಾಗಿದ್ದ ಅಫ್ಗಾನಿಸ್ತಾನ ಯುದ್ಧದ ಉದ್ದೇಶ ಸಫಲವಾಗಲಿಲ್ಲ ಎಂಬ ನಿಜಾಂಶ ಮತ್ತೆ ಸಾಬೀತಾಗಿದೆ. ಅಮೆರಿಕ ಮತ್ತು ನ್ಯಾಟೊ, ಪಡೆಗಳನ್ನು ಹಿಂಪಡೆದಿದ್ದು ಅಫ್ಗಾನಿಸ್ತಾನದ ಉಗ್ರಪಡೆಗಳು ಮತ್ತೆ ಒಟ್ಟಾಗಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT