ಶನಿವಾರ, ಫೆಬ್ರವರಿ 4, 2023
18 °C

‌ಅಲೆಕ್ಸಾದಿಂದ ಅಮೆಜಾನ್‌ಗೆ 10 ಶತಕೋಟಿ ಡಾಲರ್‌ ನಷ್ಟ: ವರದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸ್ಯಾನ್‌ಫ್ರಾನ್ಸಿಸ್ಕೊ: ಅಮೆಜಾನ್‌ನ ಧ್ವನಿ ಸಹಾಯ ಸೇವೆಯಾದ ಅಲೆಕ್ಸಾ  ಈ ವರ್ಷ 10 ಶತಕೋಟಿ ಡಾಲರ್‌(ಸುಮಾರು ₹80,000 ಕೋಟಿ) ನಷ್ಟ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. 

ಪ್ರಸ್ತುತ ಅಮೆಜಾನ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, 10,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಿದೆ ಎಂದು ವರದಿಯಾಗಿತ್ತು. 

ಬಿಸಿನೆಸ್‌ ಇನ್‌ಸೈಡರ್‌ ಮಾಧ್ಯಮ ವರದಿ ಪ್ರಕಾರ ಇ–ಕಾಮರ್ಸ್‌ ದಿಗ್ಗಜ ಅಮೆಜಾನ್‌ಗೆ ಅಲೆಕ್ಸಾ ಸೇವೆ ಅತ್ಯಂತ ನಷ್ಟದ ವಿಭಾಗವಾಗಿದೆ. 2022ರ ಜೂನ್‌ ತ್ರೈಮಾಸಿಕದಲ್ಲಿ ಕಂಪನಿ 3 ಶತಕೋಟಿ ಡಾಲರ್‌ ನಷ್ಟ ಅನುಭವಿಸಿದೆ. 

ಹಾರ್ಡ್‌ವೇರ್‌ ವಿಭಾಗ ಈ ವರ್ಷ 10 ಶತಕೋಟಿ ಡಾಲರ್‌ ನಷ್ಟ ಎದುರಿಸಲು ಸಿದ್ಧವಾಗಿದೆ ಎಂದು ವರದಿ ಹೇಳಿದೆ. ಅಲೆಕ್ಸಾ, ಪರಿಕಲ್ಪನೆಯ ಬಹುದೊಡ್ಡ ವೈಫಲ್ಯ ಮತ್ತು ಕೈಚೆಲ್ಲಿದ ಅವಕಾಶ ಎಂದು ವರದಿ ತಿಳಿಸಿದೆ.

2020ರಲ್ಲಿ ಜೆಫ್‌ ಬಿಜೋಸ್‌ ಅಲೆಕ್ಸಾದಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಹೊಸ ಸಿಇಒ ಆ್ಯಂಡಿ ಜಸ್ಸಿ ಕೂಡ ಅಲೆಕ್ಸಾ ಸೇವೆಯನ್ನು ಮೇಲೆತ್ತಲು ವಿಫಲವಾದರು. ಅಮೆಜಾನ್‌ನ ಬಹುತೇಕ ಸಾಧನಗಳನ್ನು ನಷ್ಟದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು