ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಿಂದ ಸ್ಥಳಾಂತರಕ್ಕೆ ಒತ್ತು ನೀಡಿದ್ದೇವೆ: ಕಮಲಾ ಹ್ಯಾರಿಸ್‌

Last Updated 24 ಆಗಸ್ಟ್ 2021, 8:04 IST
ಅಕ್ಷರ ಗಾತ್ರ

ಸಿಂಗಪುರ: ಅಮೆರಿಕವು ತನ್ನ ನಾಗರಿಕರು, ಅಂತರರಾಷ್ಟ್ರೀಯ ಪಾಲುದಾರರು ಮತ್ತು ಅಫ್ಗಾನಿಸ್ತಾನದಲ್ಲಿ ತನಗೆ ನೆರವು ನೀಡಿದವರನ್ನು ಸ್ಥಳಾಂತರಿಸಲು ಒತ್ತು ನೀಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಂಗಳವಾರ ತಿಳಿಸಿದ್ದಾರೆ.

ಮೂರು ದಿನಗಳ ಸಿಂಗಪುರ ಪ್ರವಾಸದಲ್ಲಿರುವ ಅವರು, ಅಮೆರಿಕದ ನೀತಿ ಮತ್ತು ಪಾಲುದಾರಿಕೆ ಕುರಿತು ಮಾತನಾಡಿದ್ದಾರೆ. ‘ಇದೀಗ ವಿಶ್ವದ ಬಹುತೇಕರ ಕಣ್ಣುಗಳು ಅಫ್ಗಾನಿಸ್ತಾನದ ಮೇಲೆ ನೆಟ್ಟಿರುವುದರ ಬಗ್ಗೆ ನನಗೆ ಅರಿವಿದೆ’ ಎಂದು ಅವರು ಹೇಳಿದರು.

‘ಅಫ್ಗಾನಿಸ್ತಾನದಲ್ಲಿ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ವಾತಾವರಣದ ನಡುವೆಯೂ ಈ ಐತಿಹಾಸಿಕ ಕಾರ್ಯಕ್ಕೆ ಒತ್ತು ನೀಡಿ, ಅದನ್ನು ಕೈಗೊಂಡಿದ್ದೇವೆ. ಇದಕ್ಕಾಗಿ ಅಲ್ಲಿ ಸಮವಸ್ತ್ರದಲ್ಲಿರುವ ನಮ್ಮ ಪುರುಷ, ಮಹಿಳೆಯರು, ರಾಯಭಾರ ಕಚೇರಿಯ ಸಿಬ್ಬಂದಿಗೆ ಕೃತಜ್ಞರಾಗಿದ್ದೇವೆ’ ಎಂದು ಅವರು ತಿಳಿಸಿದರು.

‘ನಾವು ಅಫ್ಗಾನಿಸ್ತಾನದಲ್ಲಿ 20 ವರ್ಷಗಳು ಯುದ್ಧ ನಡೆಸಿದ್ದೇವೆ. ನಮ್ಮ ಹಾಗೂ ಮಿತ್ರ ರಾಷ್ಟ್ರಗಳ ಸೇನೆಯ ಅನೇಕ ಸದಸ್ಯರು ಈ ಅವಧಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಅವರು ಸ್ಮರಿಸಿದರು.

‘ತಿಂಗಳ ಹಿಂದೆ, ಅಧ್ಯಕ್ಷ ಜೋ ಬೈಡನ್‌ ಅವರು ಈ ಯುದ್ಧವನ್ನು ಕೊನೆಗೊಳಿಸಲು ಧೈರ್ಯಶಾಲಿಯಾದ ಮತ್ತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡರು. ಏಕೆಂದರೆ ನಾವು ಅಲ್ಲಿಗೆ ಹೋದದ್ದನ್ನು ಸಾಧಿಸಿದ್ದೇವೆ’ ಎಂದು ಕಮಲಾ ಹ್ಯಾರಿಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT