ಮಂಗಳವಾರ, ಆಗಸ್ಟ್ 16, 2022
30 °C

ಮನುಷ್ಯರ ಬಳಿಕ ಕೆಲ ಪ್ರಾಣಿಗಳಿಗೆ ಹರಡುತ್ತೆ ಕೊರೋನಾ ಸೋಂಕು: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಇಡೀ ಮಾನವ ಕುಲವನ್ನು ಕೊರೋನಾ ವೈರಸ್ ಸೋಂಕು ಬೆಚ್ಚಿ ಬೀಳಿಸಿದೆ. ಮಾನವನ ಬಳಿಕ ಈಗ ಕೆಲ ಪ್ರಾಣಿ ವರ್ಗಕ್ಕೂ ಈ ಸೋಂಕು ಹರಡುವ ಸಂಭವವಿದೆ ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

10 ಜಾತಿಯ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು, ಯೂರೋಪಿನಲ್ಲಿ ಕಂಡು ಬರುವ ಮುಂಗುಸಿ ಜಾತಿಯ ಪ್ರಾಣಿ ಫೆರೆಟ್ಸ್. ಸ್ವಲ್ಪ ಪ್ರಮಾಣದಲ್ಲಿ ಬೆಕ್ಕು, ನಾಯಿ ಮತ್ತು ಪುನುಗು ಬೆಕ್ಕುಗಳು ಈ ಕೊರೊನಾ ಸೋಂಕಿಗೆ ಒಳಗಾಗಬಹುದಾಗಿದೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ.

ಜರ್ನಲ್ ಪಿಎಲ್‌ಓ ಕಾಂಪ್ಯುಟೇಶನಲ್ ಬಯೋಲಜಿಯಲ್ಲಿ ಅಧ್ಯಯನದಿಂದ ಹೊರ ಬಂದ ಅಂಶಗಳನ್ನ ಪ್ರಕಟಿಸಲಾಗಿದ್ದು, ಮನುಷ್ಯರಿಗೆ ಹೋಲಿಸಿದರೆ ಬಾತುಕೋಳಿ, ಇಲಿಗಳು, ಹಂದಿ, ಕೋಳಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುವ ಅಥವಾ ಒಳಗಾಗದೆಯೂ ಇರಬಹುದು. ಆದರೆ, ಫೆರೆಟ್ಸ್, ಫುನುಗು ಬೆಕ್ಕು, ನಾಯಿಗಳು ಸೋಂಕಿಗೆ ಒಳಗಾಗುವ ಸಂಭವವಿದೆ ಎಂದು ಅಧ್ಯಯನ ಹೇಳುತ್ತೆ.

"ಯಾವ ಪ್ರಾಣಿಗಳು ಸಾರ್ಸ್–ಕೋವಿಡ್–2 ಸೋಂಕಿಗೆ ಒಳಗಾಗಬಹುದು ಎಂಬ ಮಾಹಿತಿ ತಿಳಿದ ಬಳಿಕ ಮುಂದಿನ ದಿನಗಳಲ್ಲಿ ಮತ್ತೆ ಕೊರೋನಾ ವೈರಸ್ ಆವರಿಸುವುದರಿಂದ ಈ ಪ್ರಾಣಿಗಳ ಪ್ರಾಣಿ ಸಂಗ್ರಹಾಲಯ ಮಾಡುವುದನ್ನ ಕೈಬಿಡಲು ನಮಗೆ ಅನುಕೂಲವಾಗಿದೆ," ಎಂದು ಸ್ಪೇನ್‌ನ ಸೆಂಟರ್ ಫಾರ್ ಜಿನೋಮಿಕ್ ರೆಗ್ಯುಲೇಶನ್ ಸಂಸ್ಥೆಯ ಸಹ ಪ್ರಾಧ್ಯಾಪಕ ಲೂಯಿಸ್ ಸೆರ್ರಾನೋ ಹೇಳಿದ್ದಾರೆ.

"ನಮ್ಮ ಆವಿಷ್ಕಾರದಲ್ಲಿ ಫೆರೆಟ್‌ಗೆ ನಿಕಟ ಸಂಬಂಧ ಹೊಂದಿರುವ ಮಿಂಕ್‌ಗಳು ಏಕೆ ಈ ಸೋಂಕಿಗೆ ಒಳಗಾಗುತ್ತಿವೆ ಎಂಬುದರ ಸುಳಿವು ಸಿಕ್ಕಿದೆ, ಈ ಪ್ರಾಣಿಗಳು ಕೆಲಸಗಾರರೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಪರಸ್ಥಿತಿ ಕೆಟ್ಟದಾಗಿದೆ" ಎಂದು ಸೆರಾನೊ ಹೇಳಿದರು.

ಕರೋನವೈರಸ್ ತನ್ನ ಮೇಲ್ಮೈಯಲ್ಲಿ ಚಾಚಿಕೊಂಡಿರುವ ಸ್ಪೈಕ್ ಪ್ರೋಟೀನ್‌ಗಳನ್ನು ವಿವಿಧ ಪ್ರಾಣಿಗಳ ಜೀವಕೋಶಗಳಿಗೆ ಒಳನುಸುಳಲು ಹೇಗೆ ಬಳಸುತ್ತದೆ ಎಂಬುದನ್ನು ಪರೀಕ್ಷಿಸಲು ಅಧ್ಯಯನದಲ್ಲಿ ವಿಜ್ಞಾನಿಗಳು ಕಂಪ್ಯೂಟರ್ ಮಾಡೆಲಿಂಗ್ ಅನ್ನು ಬಳಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು