ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ವರ್ಡ್‌ ವಿ.ವಿ ಪತ್ರಿಕೆ ಅಧ್ಯಕ್ಷೆಯಾಗಿ ಭಾರತ ಮೂಲದ ಅಪ್ಸರಾ ಐಯ್ಯರ್‌ ಆಯ್ಕೆ

Last Updated 7 ಫೆಬ್ರುವರಿ 2023, 2:46 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಹಾರ್ವರ್ಡ್‌ ಕಾನೂನು ಶಾಲೆ ಹೊರತರುವ ಪ್ರತಿಷ್ಠಿತ ಪತ್ರಿಕೆ ‘ ಹಾರ್ವರ್ಡ್‌ ಲಾ ರಿವಿ‘ನ ಅಧ್ಯಕ್ಷೆಯಾಗಿ 2ನೇ ವರ್ಷದಲ್ಲಿ ಓದುತ್ತಿರುವ ಭಾರತ ಮೂಲದ ಅಮೆರಿಕ ವಿದ್ಯಾರ್ಥಿನಿ ಅಪ್ಸರಾ ಐಯ್ಯರ್‌ ಆಯ್ಕೆಯಾಗಿದ್ದಾರೆ. ಈ ಮೂಲಕ 136 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಈ ಕುರಿತು ವಿ.ವಿಯ ವಿದ್ಯಾರ್ಥಿ ಪತ್ರಿಕೆ ಹಾರ್ವರ್ಡ್‌ ಕ್ರಿಮಿಸನ್‌ ಸೋಮವಾರ ವರದಿ ಮಾಡಿದೆ. ಅಪ್ಸರಾ ಐಯ್ಯರ್ 137ನೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಪತ್ರಿಕೆಯನ್ನು 1887 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಹಳೆಯ ವಿದ್ಯಾರ್ಥಿ-ಚಾಲಿತ ಕಾನೂನು ವಿದ್ಯಾರ್ಥಿವೇತನ ಪ್ರಕಟಣೆಗಳಲ್ಲಿ ಒಂದಾಗಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

ಅಪ್ಸರಾ ಅವರು 2016ರಲ್ಲಿ ಅರ್ಥಶಾಸ್ತ್ರ, ಗಣಿತ ಮತ್ತು ಸ್ಪಾನಿಷ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT