ಸೋಮವಾರ, ಜೂನ್ 14, 2021
22 °C

ಅಪ್ಘಾನಿಸ್ತಾನ | ಶಾಲೆಯೊಂದರ ಬಳಿ ಬಾಂಬ್ ದಾಳಿ: 40 ಸಾವು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಕಾಬೂಲ್‌: ಇಲ್ಲಿನ ಸಮೀಪದ ಶಾಲೆಯೊಂದರ ಬಳಿ ಬಾಂಬ್‌ ದಾಳಿ ನಡೆಸಲಾಗಿದ್ದು ಘಟನೆಯಲ್ಲಿ 40 ಜನರು ಮೃತಪಟ್ಟಿದ್ದಾರೆ ಎಂದು ಆಪ್ಘನ್‌ ಸರ್ಕಾರ ಶನಿವಾರ ತಿಳಿಸಿದೆ.

ಮೃತರೆಲ್ಲರೂ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 47 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 12 ಜನರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಆಪ್ಘನ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯಗಳಿವೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಕಾಬೂಲ್‌ನಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ.

2021ರ ಸೆಪ್ಟಂಬರ್ 11ರ ಒಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ವಾಪಾಸು ಕರೆಸಿಕೊಳ್ಳುವ ನಿರ್ಧಾರ ಪ್ರಕಟಿಸಿದ ಬಳಿಕ ಅಪ್ಘಾನಿಸ್ತಾನದಲ್ಲಿ ಬಾಂಬ್‌ ದಾಳಿ ಪ್ರಕರಣಗಳು ಹೆಚ್ಚಿವೆ. ಅಮೆರಿಕ ಘೋಷಣೆಯ ಬಳಿಕ ತಾಲಿಬಾನ್‌ ಉಗ್ರ ಸಂಘಟನೆ ದಾಳಿಯನ್ನು ಹೆಚ್ಚಿಸಿದೆ ಎಂದು ಆಪ್ಘನ್‌ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿಯವರೆಗೂ ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಒಪ್ಪಿಕೊಂಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು