ಶನಿವಾರ, ಜನವರಿ 23, 2021
21 °C

ಸ್ಥಳೀಯರಿಗೆ ಗೌರವ: ರಾಷ್ಟ್ರಗೀತೆಯಲ್ಲಿನ ‘ಪದ‘ ಬದಲಿಸಿದ ಆಸ್ಟ್ರೇಲಿಯಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ಯಾನ್‌ಬೆರಾ: ಸ್ಥಳೀಯರನ್ನು ಗೌರವಿಸಲು ಹಾಗೂ ಏಕತಾ ಮನೋಭಾವವನ್ನು ಪ್ರತಿಬಿಂಬಿಸುವುದಕ್ಕಾಗಿ ಆಸ್ಟ್ರೇಲಿಯಾ ತನ್ನ ರಾಷ್ಟ್ರಗೀತೆಯಲ್ಲಿ ಒಂದು ಪದವನ್ನು ಬದಲಾಯಿಸಿದೆ.

ಹೊಸ ವರ್ಷದ ಮುನ್ನಾದಿನವಾದ ಗುರುವಾರದಂದು ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು, ‘ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್‌‘ ಎಂಬ ರಾಷ್ಟ್ರಗೀತೆಯ ಎರಡನೇ ಸಾಲಿನಲ್ಲಿರುವ  ‘ನಾವು ಯುವಕರು ಮತ್ತು ಸರ್ವ ಸ್ವತಂತ್ರರು‘ ವಾಖ್ಯದಲ್ಲಿ ‘ನಾವು ಯುವಕರು‘ ಪದಗಳ ಬದಲಿಗೆ ‘ನಾವೆಲ್ಲ ಒಂದೇ' ಎಂದು ಸೇರಿಸಿರುವುದಾಗಿ ಘೋಷಿಸಿದರು.

ಈ ಬದಲಾವಣೆ ಶುಕ್ರವಾರದಿಂದ ಜಾರಿಗೆ ಬಂದಿದೆ.

‘ಏಕತೆ ಎಂಬ ಅಂಶ ನಮ್ಮ ರಾಷ್ಟ್ರಗೀತೆಯಲ್ಲಿ ಹೆಚ್ಚು ಸಂಪೂರ್ಣವಾಗಿ ಪ್ರತಿಫಲಿಸುತ್ತಿದೆ‘ ಎಂದು ಹೇಳಿದ ಮಾರಿಸನ್, ಆಸ್ಟ್ರೇಲಿಯಾ ಈ ಭೂಮಿಯ ಮೇಲಿನ ಅತ್ಯಂತ ಯಶಸ್ವಿ ಬಹುಸಾಂಸ್ಕೃತಿಕ ರಾಷ್ಟ್ರ‘ ಎಂದು ಹೆಮ್ಮೆಯಿಂದ ನುಡಿದರು.

‘ಆಧುನಿಕ ರಾಷ್ಟ್ರವಾಗಿರುವ ಆಸ್ಟ್ರೇಲಿಯಾ, ಹೋಲಿಕೆಯ ದೃಷ್ಟಿಯಿಂದ ಚಿಕ್ಕ ವಯಸ್ಸಿನ ರಾಷ್ಟ್ರವಾಗಿರಬಹುದು. ಆದರೆ,  ನಮ್ಮ ದೇಶಕ್ಕೆ ಪ್ರಾಚೀನ ಇತಿಹಾಸವಿದೆ. ಹಾಗೆಯೇ, ಆ ಇತಿಹಾಸವನ್ನು ನಾವು ಅಂಗೀಕರಿಸುತ್ತೇವೆ ಮತ್ತು ಗೌರವಿಸುತ್ತೇವೆ‘ ಎಂದು ಮಾರಿಸನ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು