ಗುರುವಾರ , ಡಿಸೆಂಬರ್ 3, 2020
19 °C

ಆಸ್ಟ್ರೇಲಿಯಾ: ಮೆಲ್ಬರ್ನ್‌ನಲ್ಲಿ 111 ದಿನಗಳ ಲಾಕ್‌ಡೌನ್‌ ಅಂತ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಆಸ್ಟ್ರೇಲಿಯಾದ ಎರಡನೇ ಅತಿ ದೊಡ್ಡ ನಗರ ಮೆಲ್ಬರ್ನ್‌ನಲ್ಲಿ ವಿಧಿಸಲಾಗಿದ್ದ 111 ದಿನಗಳ ಲಾಕ್‌ಡೌನ್‌ ಅನ್ನು ಬುಧವಾರ ತೆರವುಗೊಳಿಸಲಾಯಿತು.

ನಗರದಲ್ಲಿನ 6,200 ದಿನಸಿ ಅಂಗಡಿಗಳು, 5,800 ಕೆಫೆ ಮತ್ತು ರೆಸ್ಟೋರೆಂಟ್‌ಗಳು, 1,000 ಬ್ಯೂಟಿ ಸಲೂನ್‌ಗಳು ಹಾಗೂ 800 ಪಬ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇವುಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಸುಮಾರು 1.80 ಲಕ್ಷ ಮಂದಿಯ ಉದ್ಯೋಗದ ಮೇಲೆ ಪರಿಣಾಮ ಬೀರಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜನರಿಗೆ ತಮ್ಮ ಮನೆಯಿಂದ ಕೇವಲ 25 ಕಿ.ಮೀ ದೂರದವರೆಗೆ ಪ್ರಯಣಿಸಲು ಮಾತ್ರ ಅನುಮತಿ ನೀಡಲಾಗಿದೆ. ಅಲ್ಲದೇ ಮನೆಯಿಂದಲ್ಲೇ ಕೆಲಸ(ವರ್ಕ್‌ ಫ್ರಮ್ ಹೋಮ್‌) ಮಾಡಲು ಅವಕಾಶ ಕಲ್ಪಿಸಿರುವುದರಿಂದ ಬುಧವಾರ ರಸ್ತೆಗಳಲ್ಲಿ ಜನ ಸಂಚಾರ ಬಹಳ ಕಡಿಮೆಯಾಗಿತ್ತು.

ಈ ಮೊದಲು ರೆಸ್ಟೋರೆಂಟ್‌ಗಳಿಗೆ ಪಾರ್ಸಲ್‌ ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.

 ಸೋಮವಾರದಿಂದ ಯಾವುದೇ ಹೊಸ ಪ್ರಕರಣಗಳು ನಗರದಲ್ಲಿ ವರದಿಯಾಗಿರಲಿಲ್ಲ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು