ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿನ ವಿದ್ಯಾರ್ಥಿಗಳು ಡಿ.1ರಿಂದ ಆಸ್ಟ್ರೇಲಿಯಾಗೆ ಮರಳಲು ಅವಕಾಶ

Last Updated 22 ನವೆಂಬರ್ 2021, 5:06 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿ ಕೋವಿಡ್‌ಗೆ ಸಂಬಂಧಿಸಿದ ನಿಯಮಾವಳಿಗಳನ್ನುಮುಂದಿನ ವಾರದಿಂದ ಸಡಿಸಲಾಗುತ್ತಿದ್ದು ಎರಡೂ ಲಸಿಕೆ ಹಾಕಿಸಿಕೊಂಡ 2 ಲಕ್ಷ ವಿದೇಶಿ ವಿದ್ಯಾರ್ಥಿಗಳು ಮತ್ತು ನೌಕರರು ದೇಶಕ್ಕೆ ವಾಪಸ್ಸಾಗಲಿದ್ದಾರೆ ಎಂದು ಸರ್ಕಾರ ಅಂದಾಜು ಮಾಡಿದೆ.

ಆಸ್ಟ್ರೇಲಿಯಾಕ್ಕೆ ಮರಳುವವರಿಗೆ ಈಗ ಕ್ವಾರಂಟೈನ್‌ ಅವಧಿ ಇರುವುದಿಲ್ಲ. ಡಿಸೆಂಬರ್‌ 1ರಿಂದ ವಿದ್ಯಾರ್ಥಿಗಳು, ಕುಶಲ ನೌಕರರು ಸಿಡ್ನಿ ಮತ್ತು ಮೆಲ್ಬರ್ನ್‌ ವಿಮಾನನಿಲ್ದಾಣಗಳಲ್ಲಿ ಬಂದಿಳಿಯಬಹುದು. ಪ್ರಯಾಣ ನಿಷೇಧದಿಂದ ವಿನಾಯಿತಿ ಪಡೆಯುವ ಅಗತ್ಯ ಇರುವುದಿಲ್ಲ ಎಂದು ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೋಮವಾರ ಹೇಳಿದ್ದಾರೆ.

ಜನವರಿ ವೇಳೆಗೆ 2 ಲಕ್ಷ ವಿದ್ಯಾರ್ಥಿಗಳು ಮತ್ತು ನೌಕರರು ಮರಳುವ ನಿರೀಕ್ಷೆ ಇದೆ. ಸಾಮಾನ್ಯ ಪ್ರವಾಸಿಗರಿಗೆ ಪ್ರವೇಶ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT