ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ: ಹಲವೆಡೆ ಭಾರಿ ಮಳೆ, ಪ್ರವಾಹ–ಜನಜೀವನ ತತ್ತರ

Last Updated 21 ಮಾರ್ಚ್ 2021, 11:48 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂಸೌತ್ ವೇಲ್ಸ್‌ ರಾಜ್ಯದಲ್ಲಿ ಭೀಕರ ಪ್ರವಾಹ ತಲೆದೋರಿರುವ ಕಾರಣ ಅಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ.

ರಾಜ್ಯದ ತುರ್ತು ರಕ್ಷಣಾ ಸೇವಾ ಸಹಾಯವಾಣಿಗೆ ಸಹಾಯ ಯಾಚಿಸಿ ಶನಿವಾರ ರಾತ್ರಿ 640ಕ್ಕೂ ಹೆಚ್ಚಿನ ಕರೆಗಳು ಬಂದಿದ್ದವು. ಅದರಲ್ಲಿ 66 ಕರೆಗಳು ಪ್ರವಾಹದಲ್ಲಿ ರಕ್ಷಣೆ ಕೋರಿ ಬಂದ ಕರೆಗಳಾಗಿದ್ದವು.

‘ಪ್ರವಾಹದಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಲಾಗಿದೆ’ ಎಂದು ನ್ಯೂಸೌತ್ ವೆಲ್ಸ್‌ ರಾಜ್ಯದ ಮುಖ್ಯಸ್ಥ ಗ್ಲಾಡಿಸ್ ಬೆರೆಜಿಕ್ಲಿಯನ್ ತಿಳಿಸಿದ್ದಾರೆ.

‘ರಾಜ್ಯದ ಈಶಾನ್ಯಭಾಗದ ಉತ್ತರ ಕರಾವಳಿಯ ಹಲವೆಡೆ ಪ್ರವಾಹದಲ್ಲಿ ಸಿಲುಕಿರುವ ಜನರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿ 100 ವರ್ಷಗಳಿಗೊಮ್ಮೆ ಆಸ್ಟ್ರೇಲಿಯಾ ಇಂಥ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗುತ್ತದೆ. ಉತ್ತರ ಕರಾವಳಿಯಲ್ಲಿ ಮಳೆ ನಿಲ್ಲುವ ಸೂಚನೆ ಸದ್ಯಕ್ಕೆ ಕಾಣುತ್ತಿಲ್ಲ. ಈಗಾಗಲೇ ಪ್ರವಾಹದಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಗ್ಲಾಡಿಸ್ ಅಭಿಪ್ರಾಯಪಟ್ಟಿದ್ದಾರೆ.

‘ಪಶ್ಚಿಮ ಸಿಡ್ನಿಯ ಕೆಲವು ಭಾಗಗಳಲ್ಲಿ ಪ್ರತಿ 50 ವರ್ಷಗಳಿಗೊಮ್ಮೆ ಹವಾಮಾನದಲ್ಲಿ ಏರುಪೇರುಗಳಾಗುತ್ತಿದೆ. ಇಲ್ಲಿನ ಕೆಲವು ಸ್ಥಳಗಳಲ್ಲಿ ಶುಕ್ರವಾರ 300 ಮಿಲಿ ಲೀಟರ್‌ನಷ್ಟು ಮಳೆಯಾಗಿದ್ದು, ಇದು ಹಲವು ದಾಖಲೆಗಳನ್ನು ಮುರಿದಿದೆ’ ಎಂದು ಗ್ಲಾಡಿಸ್ ಹೇಳಿದ್ದಾರೆ.

ಪಶ್ಚಿಮ ಸಿಡ್ನಿಯಲ್ಲಿರುವ ವರ್ರಗಂಬಾ ಅಣೆಕಟ್ಟು ಭಾನುವಾರ ತುಂಬಿ ಹರಿದಿದ್ದು, ಇದುವರೆಗೆ ರಾಜ್ಯದಲ್ಲಿ 13 ಕಡೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಮಳೆ ಮತ್ತು ಪ್ರವಾಹದ ವಾತಾವರಣ ಇನ್ನೂ ಮೂರ್ನಾಲ್ಕು ದಿನ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT