ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೀಜಿಂಗ್‌ನಲ್ಲಿ ವರ್ಕ್‌ಫ್ರಮ್‌ ಹೋಂ ವಿಸ್ತರಣೆ

Last Updated 23 ಮೇ 2022, 13:07 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರ್ಕ್‌ಫ್ರಮ್‌ ಹೋಂ ಆದೇಶವನ್ನು ಸೋಮವಾರ ಮತ್ತೆ ವಿಸ್ತರಿಸಲಾಗಿದೆ. ಹೆಚ್ಚುವರಿ ಸಾಮೂಹಿಕ ಕೋವಿಡ್‌ ಪತ್ತೆ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ.

ಎಲ್ಲ ಕ್ಷೇತ್ರದ ನೌಕರರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ನಗರದ ಹಲವು ಕಡೆ ನಿವಾಸಿಗಳು ಮನೆಯಿಂದ ಹೊರ ಬಾರದಂತೆ, ತಡೆಗೋಡೆಗಳನ್ನು ದಾಟದಂತೆ ನಿರ್ಬಂಧ ವಿಧಿಸಲಾಗಿದೆ.

ಬೀಜಿಂಗ್‌ನಲ್ಲಿ ಹೊಸದಾಗಿ 99 ಪ್ರಕರಣಗಳು ವರದಿಯಾಗಿವೆ. ಕಳೆದ ದಿನಕ್ಕಿಂತಲೂ 50 ಪ್ರಕರಣಗಳು ಏರಿಕೆಯಾಗಿವೆ. ದೇಶದಲ್ಲಿ ಒಟ್ಟು 802 ಹೊಸ ಪ್ರಕರಣಗಳು ವರದಿಯಾಗಿವೆ. ಕಟ್ಟುನಿಟ್ಟಾದ ಕ್ವಾರಂಟೈನ್‌ ನಿಯಮ, ಲಾಕ್‌ಡೌನ್ ಜಾರಿಯಲ್ಲಿದ್ದು, ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ವಾಣಿಜ್ಯ ನಗರಿ ಶಾಂಘೈನಲ್ಲಿ ಲಾಕ್‌ಡೌನ್‌ನಿಂದ 4.80 ಲಕ್ಷ ಮಂದಿ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. 15.9 ಲಕ್ಷ ಜನರಿಗೆ ಅಕ್ಕಪಕ್ಕದ ಮನೆಗೆ ಓಡಾಡಲು ಅನಮತಿಸಲಾಗಿದೆ. 2.12 ಕೋಟಿ ಮಂದಿ ಸರಳ ನಿರ್ಬಂಧದಲ್ಲಿ ಇದ್ದಾರೆ.

ಓಮನ್‌ನಲ್ಲಿ ಕೋವಿಡ್‌ ನಿರ್ಬಂಧ ತೆರವು: ಓಮನ್‌ನಲ್ಲಿಕೋವಿಡ್‌ ಪ್ರಕರಣಗಳು ಮತ್ತು ಅದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಮಾಸ್ಕ್‌ ಕಡ್ಡಾಯ ಸೇರಿದಂತೆ ಕೋವಿಡ್‌ ನಿಯಮಗಳನ್ನು ಓಮನ್‌ ಸುಲ್ತಾನ್‌ ತೆರವುಗೊಳಿಸಿದ್ದಾರೆ.‌

ಇನ್ಮುಂದೆ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪು ಸೇರುವುದರ ಮೇಲಿನ ನಿರ್ಬಂಧವನ್ನು ತೆಗದು ಹಾಕಿದ್ದು, ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಸೇನಾಧಿಕಾರಿಯ ಶವಕ್ಕೆ ಹೆಗಲುಕೊಟ್ಟ ಕಿಮ್‌: ಉತ್ತರ ಕೊರಿಯಾದಲ್ಲಿ 28 ಲಕ್ಷ ಮಂದಿ ಕೋವಿಡ್‌ ಸೋಂಕಿತರಿದ್ದಾರೆ ಎಂಬ ವರದಿಗಳ ನಡುವೆಯೇ, ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರುಹಿರಿಯ ಸೇನಾ ಅಧಿಕಾರಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT