ಗುರುವಾರ , ಆಗಸ್ಟ್ 11, 2022
21 °C

ರಾಜಕೀಯ ಪ್ರವೇಶಿಸಿದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಕಿರಿ ಮಗಳು ಆಸೀಫಾ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಕಿರಿಯ ಮಗಳು ಆಸೀಫಾ ಭುಟ್ಟೋ ಜರ್ದಾರಿ ಅವರು ಸೋಮವಾರ ರಾಜಕೀಯ ಪ್ರವೇಶ ಮಾಡಿದ್ದಾರೆ.

ಮುಲ್ತಾನ್‌ನಲ್ಲಿ ಸೋಮವಾರ ನಡೆದ 11 ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿಯ (ಪಿಡಿಎಂ) ರ‍್ಯಾಲಿಯಲ್ಲಿ ಆಸೀಫಾ ಭುಟ್ಟೋ ಅವರು ಕೂಡ  ಭಾಗವಹಿಸಿದ್ದರು.

ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು,‘ಪ್ರಜಾಪ್ರಭುತ್ವಕ್ಕಾಗಿ ನನ್ನ ತಾಯಿ ಬೆನಜೀರ್ ಭುಟ್ಟೊ ಅವರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳಿ ಎಂದು ಹೇಳಿದರು. ಅಲ್ಲದೆ ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ತನ್ನ ಸಹೋದರ ಬಿಲಾವಾಲ್ ಭುಟ್ಟೋ ಅವರನ್ನು ಕೂಡ ಬೆಂಬಲಿಸಿ’ ಎಂದು ಅವರು ಮನವಿ ಮಾಡಿದರು.

ತನ್ನ ಸಹೋದರನ ಪರವಾಗಿ ಆಸೀಫಾ ಭುಟ್ಟೋ ಜರ್ದಾರಿ ಅವರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

‘ನನ್ನ ಸಹೋದರ ಬೆನಜೀರ್ ಭುಟ್ಟೊ ಅವರಲ್ಲಿ ಕೋವಿಡ್‌ ದೃಢಪಟ್ಟಿದೆ. ಇಂತಹ ಸಮಯದಲ್ಲಿ ನಾನು ನಿಮ್ಮ ಸಮ್ಮುಖದಲ್ಲಿ ನಿಂತಿದ್ದೇನೆ. ನೀವು ನನ್ನ ತಾಯಿ ಅವರನ್ನು ಬೆಂಬಲಿಸಿದಂತೆ ನನ್ನ ಸಹೋದರನ ಜೊತೆಯೂ ನಿಲ್ಲುತ್ತೀರ ಎನ್ನುವ ನಂಬಿಕೆ ಇದೆ. ಬಿಲಾವಲ್ ಮತ್ತು ನಿಮ್ಮನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

‘ಪಾಕಿಸ್ತಾನ ಪೀಪಲ್ಸ್ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದರೆ ಅವರ ಸಹೋದರಿಯರು ಸರ್ಕಾರದ ವಿರುದ್ಧ ‍ಪ್ರತಿಭಟಿಸುತ್ತಾರೆ. ದೇಶವನ್ನು ರಕ್ಷಿಸಲು ಮುಂದಾಗುತ್ತಾರೆ’ ಎಂದು ಅಸೀಫಾ ಎಚ್ಚರಿಕೆ ನೀಡಿದರು.

ಈ ರ‍್ಯಾಲಿಯಲ್ಲಿ ಜಮಾಯತ್ ಉಲೆಮಾ-ಎ-ಇಸ್ಲಾಂ- (ಎಫ್) ಮುಖ್ಯಸ್ಥ ಮೌಲಾನಾ ಫಜ್ಲೂರ್ ರೆಹಮಾನ್, ಪಿಎಂಎಲ್-ಎನ್ ಉಪಾಧ್ಯಕ್ಷೆ ಮರಿಯಮ್ ನವಾಜ್, ಇತರ ಮುಖಂಡರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು