ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ 300 ಕೋಟಿ ಡಾಲರ್ ಸೇನಾ ನೆರವು ಘೋಷಿಸಿದ ಬೈಡನ್‌

Last Updated 24 ಆಗಸ್ಟ್ 2022, 16:21 IST
ಅಕ್ಷರ ಗಾತ್ರ

ವಾಷಿಂಗ್ಟನ್ (ರಾಯಿಟರ್ಸ್): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು 31ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಯುದ್ಧಪೀಡಿತ ಉಕ್ರೇನ್‌ಗೆ300 ಕೋಟಿ ಡಾಲರ್ ಮೊತ್ತದ ರಕ್ಷಣಾ ನೆರವು ಘೋಷಿಸಿದ್ದಾರೆ.

ಉಕ್ರೇನಿಗರು ತಮ್ಮ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಹೋರಾಟ ಮುಂದುವರಿಸುತ್ತಿರುವುದರಿಂದ ಅಮೆರಿಕವು ಅವರಿಗೆ ಅಗತ್ಯ ಬೆಂಬಲ ನೀಡಲು ಬದ್ಧವಾಗಿದೆ ಎಂದು ಬೈಡನ್‌ ತಿಳಿಸಿದ್ದಾರೆ.

ಆರು ತಿಂಗಳುಗಳಿಂದ ರಷ್ಯಾದ ಆಕ್ರಮಣ ಎದುರಿಸುತ್ತಿರುವ ಉಕ್ರೇನ್‌ಗೆ ಈವರೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಲಭಿಸಿದ ಅತಿದೊಡ್ಡ ನೆರವು ಇದಾಗಿದೆ. ಈ ವರೆಗೆ ಬೈಡನ್‌ ಆಡಳಿತಉಕ್ರೇನ್‌ಗೆ ಸುಮಾರು 10.6 ಶತಕೋಟಿ ಡಾಲರ್ ಮೊತ್ತದ ಸೇನಾ ನೆರವು ನೀಡಿದೆ.

ಮುಂಬರುವ ದಿನಗಳಲ್ಲಿ ಉಕ್ರೇನ್‌ ನಾಗರಿಕ ಮೂಲಸೌಕರ್ಯ ಮತ್ತು ಸರ್ಕಾರಿ ಸೌಲಭ್ಯಗಳನ್ನು ಗುರಿಯಾಗಿಸಿ ರಷ್ಯಾ ಹೊಸ ದಾಳಿಗೆ ಯೋಜಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT