ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ -1 ಬಿ, ಎಲ್ -1 ವೀಸಾ ಸುಧಾರಣೆಗೆ ಮಸೂದೆ

Last Updated 29 ಮಾರ್ಚ್ 2023, 13:29 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ವಿದೇಶಿ ಉದ್ಯೋಗಿಗಳ ನೇಮಕಾತಿಯಲ್ಲಿ ಹೆಚ್ಚು ಪಾರದರ್ಶಕತೆ, ಎಚ್– 1ಬಿ ಮತ್ತು ಎಲ್ -1 ವೀಸಾ ಯೋಜನೆಗಳಲ್ಲಿ ಸಮಗ್ರ ಸುಧಾರಣೆಗಾಗಿ ಅಮೆರಿಕದ ಪ್ರಭಾವಿ ಸಂಸದರ ಗುಂಪೊಂದು ಸೆನೆಟ್‌ನಲ್ಲಿ ಮಸೂದೆ ಮಂಡಿಸಿದೆ.

ಪ್ರಭಾವಿ ಸೆನೆಟರ್‌ಗಳಾದ ಡಿಕ್ ಡರ್ಬಿನ್ ಮತ್ತು ಚಕ್ ಗ್ರಾಸ್ಲೆ ಅವರು ಈ ಮಸೂದೆ ಮಂಡಿಸಿದ್ದು, ಸೆನೆಟರ್‌ಗಳಾದ ಟಾಮಿ ಟ್ಯೂಬರ್‌ವಿಲ್ಲೆ, ಬರ್ನಿ ಸ್ಯಾಂಡರ್ಸ್, ಶೆರೋಡ್‌ ಬ್ರೌನ್ ಮತ್ತು ರಿಚರ್ಡ್ ಬ್ಲೂಮೆಂಥಾಲ್ ಅವರು ಈ ಮಸೂದೆ ಬೆಂಬಲಿಸಿದ್ದಾರೆ.

ತಾಂತ್ರಿಕ ಪರಿಣತಿ ಬಯಸುವ ವಿಶೇಷ ಉದ್ಯೋಗಗಳಿಗೆ ವಿದೇಶಿಗರನ್ನು ನೇಮಿಸಿಕೊಳ್ಳಲು ಅಮೆರಿಕ‌ದ ಕಂಪನಿಗಳಿಗೆ ವಲಸೆ ರಹಿತ ವೀಸಾ ಎಚ್ -1 ಬಿ ಅಡಿ ಅವಕಾಶವಿದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಎಚ್ -1 ಬಿ ವೀಸಾ ಯೋಜನೆಯನ್ನೇ ಅವಲಂಬಿಸಿವೆ.

ಎಲ್ -1 ಇತರ ರೀತಿಯ ಉದ್ಯೋಗ ವೀಸಾ ಆಗಿದ್ದು, ಅಮೆರಿಕದಲ್ಲಿ ನೌಕರಿ ಬಯಸುವ ವೃತ್ತಿಪರರಿಗೆ ಇದರಲ್ಲಿ ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT