ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೇಕ್‌ಡ್ಯಾನ್‌ಗೆ ಒಲಿಂಪಿಕ್ಸ್‌ ಕ್ರೀಡೆಯ ಮಾನ್ಯತೆ

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್‌ನಲ್ಲಿ ಸ್ಪರ್ಧೆಗೆ ಅವಕಾಶ
Last Updated 8 ಡಿಸೆಂಬರ್ 2020, 8:01 IST
ಅಕ್ಷರ ಗಾತ್ರ

ಜೆನೆವಾ: ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು(ಐಎಂಸಿ) ಬ್ರೇಕ್‌ಡ್ಯಾನ್‌ಗೆ ಅಧಿಕೃತ ಒಲಿಂಪಿಕ್ಸ್‌ ಕ್ರೀಡೆಯ ಮಾನ್ಯತೆ ನೀಡಿದ್ದು, 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ಡ್ಯಾನ್‌ನಲ್ಲಿ ಪದಕಕ್ಕಾಗಿ ಸೆಣಸಾಟ ನಡೆಯಲಿದೆ.

ಇದರೊಂದಿಗೆ ಸ್ಕೇಟ್‌ ಬೋರ್ಡಿಂಗ್‌, ಸ್ಪೋರ್ಟ್‌ ಕ್ಲೈಬಿಂಗ್‌ ಮತ್ತು ಸರ್ಫಿಂಗ್‌ ಕೂಡ ಇರಲಿದೆ ಎಂದು ಐಎಂಸಿ ತಿಳಿಸಿದೆ.

ಈ ಮೂರು ಕ್ರೀಡೆಗಳು ಟೊಕಿಯೊದಲ್ಲಿ ನಡೆಯಬೇಕಾಗಿದ್ದ ಒಲಂಪಿಕ್‌ ಕ್ರೀಡೆಗಳಲ್ಲಿ ಪದಾರ್ಪಣೆಗೊಳ್ಳಬೇಕಾಗಿದ್ದವು. ಆದರೆ ಕೊರೊನಾ ಸೋಂಕಿನಿಂದಾಗಿ ಈ ಕಾರ್ಯಕ್ರಮವನ್ನು 2021 ಜುಲೈ 23ಕ್ಕೆ ಮುಂದೂಡಲಾಗಿದೆ.

ಬ್ರೇಕ್‌ ಡ್ಯಾನ್ಸಿಂಗ್ ಅನ್ನು ಒಲಂಪಿಕ್ಸ್‌ನಲ್ಲಿ ಬ್ರೇಕಿಂಗ್‌ ಎಂದು ಕರೆಯಲಾಗುವುದು. 2018ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ ಡ್ಯಾನ್ಸಿಂಗ್ ಪ್ರಯೋಗಗಳ ಬಳಿಕ ಪ್ಯಾರಿಸ್‌ ಆಯೋಜಕರು ಈ ಬಗ್ಗೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದರು. 2019 ರಲ್ಲಿ ಅನುಮೋದನೆ ನೀಡಲಾಯಿತು.

ಪ್ಯಾರಿಸ್‌ ಪದಕ ಕಾರ್ಯಕ್ರಮಗಳಲ್ಲಿ ಟೋಕಿಯೊಗಿಂತ 10 ಕಡಿಮೆ ಸ್ಪರ್ಧೆಗಳಿರಲಿದ್ದು, ಒಟ್ಟು 329 ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT