ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ 2ನೇ ಎಲಿಜಬೆತ್‌ ಆಳ್ವಿಕೆಗೆ 70 ವರ್ಷ: ಬ್ರಿಟನ್‌ನಲ್ಲಿ ಅದ್ಧೂರಿ ಆಚರಣೆ

Last Updated 2 ಜೂನ್ 2022, 11:25 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್ ರಾಣಿಯಾಗಿ ಎರಡನೇ ಎಲಿಜಬೆತ್‌ ಅಧಿಕಾರ ವಹಿಸಿಕೊಂಡು 70 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ದೇಶದಾದ್ಯಂತ ನಾಲ್ಕು ದಿನಗಳ ಸಂಭ್ರಮಾಚರಣೆಗೆ ಗುರುವಾರ ಚಾಲನೆ ನೀಡಲಾಗಿದೆ.

ಅವರ 96ನೇ ಜನ್ಮ ದಿನವನ್ನೂ ಆಚರಿಸಲಾಗುತ್ತಿದ್ದು, ಈ ಅಂಗವಾಗಿ ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸಂದರ್ಭ ದೇಶದ ಜನತೆಗೆ ಧನ್ಯವಾದ ತಿಳಿಸಿರುವ ಅವರು, ‘ಬರುವ ದಿನಗಳನ್ನು ಆತ್ಮವಿಶ್ವಾಸ ಹಾಗೂ ಉತ್ಸಾಹದಿಂದ ಎದುರಿಸೋಣ’ ಎಂದು ಹೇಳಿದ್ದಾರೆ.

1952ರ ಫೆಬ್ರುವರಿ 25ರಂದು ರಾಣಿ ಎಲಿಜಬೆತ್‌ ಅವರು ಬ್ರಿಟಿಷ್‌ ಸಾಮ್ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದರು. ಆಗ ಅವರಿಗೆ 25 ವರ್ಷ ವಯಸ್ಸು.

‘ವಿಶ್ವದೆಲ್ಲೆಡೆ ಇರುವ ಹೈಕಮಿಷನ್‌ ಕಚೇರಿಗಳಲ್ಲಿ ಸಹ ಸಂಭ್ರಮಾಚರಣೆ ನಡೆಯಲಿದೆ. ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ’ ಎಂದು ಬ್ರಿಟನ್‌ನ ವಿದೇಶ, ಕಾಮನ್‌ವೆಲ್ತ್ ಹಾಗೂ ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ತಿಳಿಸಿದೆ.

ನಾಲ್ಕು ದಿನಗಳ ‘ಪ್ಲಾಟಿನಂ ಜುಬಿಲಿ’ ಆಚರಣೆ ಅಂಗವಾಗಿ ಬ್ಯಾಂಕ್‌ಗಳು ಸೇರಿದಂತೆ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ದೇಶದಾದ್ಯಂತ ಸಂತೋಷಕೂಟಗಳು ಹಾಗೂ ಮೆರವಣಿಗೆಗಳನ್ನು ಆಯೋಜಿಸಲಾಗಿದೆ.

ಬ್ರಿಟನ್ ಸೇನೆಯ ವಿವಿಧ ತುಕಡಿಗಳಿಂದ ಪಥಸಂಚಲನ ನಡೆಯಿತು. ಬಕಿಂಗ್‌ಹ್ಯಾಮ್ ಅರಮನೆಯ ಬಾಲ್ಕನಿಯಿಂದಲೇ ರಾಣಿ ಎಲಿಜಬೆತ್‌ ಅವರು ಮಿಲಿಟರಿಯ ಗೌರವ ವಂದನೆ ಸ್ವೀಕರಿಸಿದರು.

ರಶ್ದಿಗೆ ಗೌರವ: ‘ಪ್ಲಾಟಿನಂ ಜುಬಿಲಿ’ ಅಂಗವಾಗಿ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲ್ಮಾನ್‌ ರಶ್ದಿ ಸೇರಿದಂತೆಭಾರತ ಮೂಲದ 40 ಗಣ್ಯರನ್ನು ಸನ್ಮಾನಿಸಲಾಗುತ್ತದೆ.

‘ಇಂಥ ಗೌರವಕ್ಕೆ ಪಾತ್ರನಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು 74 ವರ್ಷದ ರಶ್ದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT