ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 20 ಆದಾಯ ತೆರಿಗೆ ಕಡಿತ: ಬ್ರಿಟನ್ ಜನರಿಗೆ ರಿಷಿ ಸುನಕ್‌ ಭರವಸೆ

Last Updated 1 ಆಗಸ್ಟ್ 2022, 13:49 IST
ಅಕ್ಷರ ಗಾತ್ರ

ಲಂಡನ್‌:ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದರೆ ಕೆಲವೇ ವರ್ಷಗಳಲ್ಲಿ ಆದಾಯ ತೆರಿಗೆಯ ಮೂಲ ದರವನ್ನು ಶೇ 20ರಷ್ಟು ಕಡಿತ ಮಾಡುವುದಾಗಿ ಅಭ್ಯರ್ಥಿ ರಿಷಿ ಸುನಕ್‌ ಮತದಾರರಿಗೆ ಭರವಸೆ ನೀಡಿದ್ದಾರೆ.

ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಚುನಾವಣೆಗಾಗಿ ಟೋರಿ ಸದಸ್ಯರಿಗೆ ಮತಪತ್ರ ಕಳುಹಿಸುವ ಮೂಲಕ ಸೋಮವಾರಅಂಚೆ ಮತದಾನ ಔಪಚಾರಿಕವಾಗಿ ಆರಂಭವಾಗಿದ್ದು, ಸದಸ್ಯರಿಗೆ ಇಮೇಲ್‌ನಲ್ಲಿ ಕಳುಹಿಸಿರುವ ಸಂದೇಶದಲ್ಲಿ ಸುನಕ್‌ ತೆರಿಗೆ ಕಡಿತದ ವಾಗ್ದಾನ ನೀಡಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಲಿಜ್ ಟ್ರಸ್ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸುನಕ್‌, ‘ಶೇ 20ರಷ್ಟು ಆದಾಯ ತೆರಿಗೆ ಕಡಿತ ವಾಗ್ದಾನವು ಆಮೂಲಾಗ್ರ ದೂರದೃಷ್ಟಿಯದ್ದಾಗಿದೆ. 30 ವರ್ಷಗಳಲ್ಲಿ ಇದು ಅತೀ ದೊಡ್ಡ ತೆರಿಗೆ ಕಡಿತ’ ಎಂದು ಬಣ್ಣಿಸಿದ್ದಾರೆ.

‘ಮಾರ್ಗರೆಟ್ ಥ್ಯಾಚರ್ (ಟೋರಿಯ ಮಾಜಿ ಪ್ರಧಾನಿ) ಅವರ ನೇತೃತ್ವದ ಸರ್ಕಾರ ಘೋಷಿಸಿದ್ದಂತೆ, ಜನರಿಗೆ ನಾನು ಈವರೆಗಿನ ಅತಿ ದೊಡ್ಡ ಆದಾಯ ತೆರಿಗೆ ಕಡಿತ ಸೌಲಭ್ಯವನ್ನು ಜನತೆಗೆ ತಲುಪಿಸುವ ಕನಸು ಹೊಂದಿದ್ದೇನೆ’ ಎಂದು ಹೇಳಿದ್ದಾರೆ.

ತೆರಿಗೆ ಕಡಿತ ವಿಷಯವೇ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿದ್ದು, ಲಿಜ್‌ ಟ್ರಸ್ ಅವರು ಪ್ರಚಾರದ ಮೊದಲ ದಿನದಿಂದಲೇ ತೆರಿಗೆ ಕಡಿತದ ವಾಗ್ದಾನ ನೀಡಿದ್ದರು. ಹಣದುಬ್ಬರ ತಗ್ಗಿಸುವ ಕ್ರಮಗಳತ್ತ ಚಿತ್ತ ಹರಿಸಿದ್ದ ಸುನಕ್, ಈಗ ಆದಾಯ ತೆರಿಗೆ ಕಡಿತದ ಭರವಸೆ ನೀಡಿ, ಮತದಾರರ ವಿಶ್ವಾಸ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT