ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: 6 ದಶಕಗಳ ಬಳಿಕ ಪದವಿ ಪಡೆದ ವೃದ್ಧ!

Last Updated 31 ಮೇ 2022, 13:13 IST
ಅಕ್ಷರ ಗಾತ್ರ

ಪಸಡೆನಾ, ಅಮೆರಿಕ: ಪ್ರೌಢಶಾಲಾ ಹಂತದ ಶಿಕ್ಷಣ ಪೂರೈಸಿ ಆರು ದಶಕಗಳು ಕಳೆದ ನಂತರ ವ್ಯಕ್ತಿಯೊಬ್ಬರಿಗೆ ಪದವಿ ಪ್ರಮಾಣಪತ್ರ ನೀಡಲಾಗಿದೆ.

78 ವರ್ಷದ ಟೆಡ್‌ ಸ್ಯಾಮ್ಸ್‌ ಎಂಬುವವರೇ ಪ್ರೌಢಶಾಲಾ ಪದವಿಯನ್ನು ಪಡೆದಿದ್ದು, ಕಳೆದ 60 ವರ್ಷಗಳಿಂದ ಈ ಪದವಿ ಪಡೆಯದಿದ್ದದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್‌ ಗೇಬ್ರಿಯಲ್‌ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಪದವಿ ಪಡೆದ್ದಿದ್ದಾರೆ.

ಪುಸ್ತಕವೊಂದರ ‍ಬಾಕಿ ಹಣ ನೀಡದ್ದಕ್ಕಾಗಿ ಅವರಿಗೆ ಇಷ್ಟು ದಿನಗಳವರೆಗೆ ಪದವಿಯನ್ನು ನೀಡಿರಲಿಲ್ಲ.

‘1962ರಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನನಗೆ ಕೆಲವು ತೊಂದರೆಗಳು ಎದುರಾದವು. ಹೀಗಾಗಿ ಅಂತಿಮ ಪರೀಕ್ಷೆಗಳು ಐದು ದಿನಗಳು ಇರುವಾಗ ನನ್ನನ್ನು ಶಾಲೆಯಿಂದ ಅಮಾನತು ಮಾಡಲಾಯಿತು. ಬೇಸಿಗೆಯಲ್ಲಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣನಾದೆ’ ಎಂದು ಅವರು ಹೇಳಿದ್ದಾರೆ.

‘ಪದವಿ ಪ್ರಮಾಣಪತ್ರ ಪಡೆಯಲು ಶಾಲೆಗೆ ತೆರಳಿದೆ. ಆದರೆ, ಪುಸ್ತಕವೊಂದಕ್ಕೆ ಸಂಬಂಧಿಸಿ ಆಗ ನಾನು 4.80 ಡಾಲರ್‌ ಬಾಕಿ ಉಳಿಸಿಕೊಂಡಿದ್ದರಿಂದ ನನಗೆ ಪದವಿ ಪ್ರಮಾಣ ಪತ್ರ ನೀಡಲು ಶಾಲಾ ಆಡಳಿತ ನಿರಾಕರಿಸಿತು. ಹಾಗಾಗಿ, ನಾನು ಪದವಿ ಪಡೆಯದೇ ಮರಳಿದ್ದೆ’ ಎಂದು ಅವರು ಕೆಎಬಿಸಿ–ಟಿವಿಗೆ ಹೇಳಿದ್ದಾರೆ.

‘ಬಾಕಿ ಉಳಿಸಿಕೊಂಡಿದ್ದ 4.80 ಡಾಲರ್‌ ಮೊತ್ತ ನನ್ನನ್ನು ಪದವಿ ಪ್ರಮಾಣ ಪಡೆಯುವುದರಿಂದ ಹೇಗೆ ತಡೆದಿತ್ತು ಎಂಬುದನ್ನು ನನ್ನ ಮಕ್ಕಳಿಗೆ ಹೇಳುತ್ತಿದ್ದೆ. ಈಗ ಈ ಪ್ರಮಾಣಪತ್ರವನ್ನು ನನ್ನ ಮನೆಯ ಗೋಡೆಗೆ ತೂಗು ಹಾಕುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT