ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ದಾಳಿ ಬಗ್ಗೆ ಭಾರತಕ್ಕೆ ಗುಪ್ತಚರ ಮಾಹಿತಿ: ವರದಿ ಅಲ್ಲಗಳೆದ ಅಮೆರಿಕ

Last Updated 21 ಮಾರ್ಚ್ 2023, 13:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಳೆದ ವರ್ಷ ಅಮೆರಿಕ ಸಕಾಲದಲ್ಲಿ ಗುಪ್ತಚರ ಮಾಹಿತಿ ಒದಗಿಸಿದ್ದ ಕಾರಣದಿಂದಾಗಿ ಹಿಮಾಲಯದಲ್ಲಿ ಚೀನಾದ ಹಠಾತ್‌ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ಸಾಧ್ಯವಾಯಿತು ಎಂಬ ವರದಿಯನ್ನು ಶ್ವೇತಭವನ ಅಲ್ಲಗಳೆದಿದೆ.

‘ಈ ವರದಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ’ ಎಂದು ಶ್ವೇತಭವನದ ಸಂವಹನ ಕಾರ್ಯತಂತ್ರದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ ಜಾನ್‌ ಕಿರ್ಬಿ ಅವರು ಸುದ್ದಿಗಾರರಿಗೆ ಸೋಮವಾರ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ 9ರಂದು ಅರುಣಾಚಲ ಪ್ರದೇಶದ ತವಾಂಗ್ ವಲಯದ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಉಭಯ ದೇಶಗಳ ಸೈನಿಕರು ಗಾಯಗೊಂಡಿದ್ದರು.

ಈ ದಾಳಿ ಕುರಿತಂತೆ ಭಾರತ ಸೇನೆಗೆ ಸಕಾಲಕ್ಕೆ ಅಮೆರಿಕ ಮಾಹಿತಿ ಒದಗಿಸಿತ್ತು. ಹೀಗಾಗಿಯೇ ಚೀನಾ ಆಕ್ರಮಣವನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ಸಾಧ್ಯವಾಯಿತು ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT