ಬುಧವಾರ, ಏಪ್ರಿಲ್ 14, 2021
24 °C
ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ ಡಾ. ಕ್ಯಾಥ್ಲೀನ್ ಹಿಕ್ಸ್‌

ಇಂಡೊ–ಪೆಸಿಫಿಕ್‌ ವಲಯದಲ್ಲಿ ಚೀನಾದಿಂದ ಅಕ್ರಮಣಾಕಾರಿ ವರ್ತನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಇಂಡೊ–ಪೆಸಿಫಿಕ್ ವಲಯದಲ್ಲಿ ಚೀನಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ ಡಾ. ಕ್ಯಾಥ್ಲೀನ್ ಹಿಕ್ಸ್‌ ಹೇಳಿದ್ದಾರೆ.

ನ್ಯಾಷನಲ್ ವಾರ್ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಮಾತನಾಡಿದ ಅವರು, ‘ಇಂಡೊ – ಫೆಸಿಫಿಕ್ ವಲಯದಲ್ಲಿ ಚೀನಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬೆದರಿಕೆವೊಡ್ಡುತ್ತಿದೆ’ ಎಂದು ಹೇಳಿದರು.

‘ಭಾರತದೊಂದಿಗೆ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಸಂಘರ್ಷ ಏರ್ಪಟ್ಟಿತ್ತು. ಭಾರತದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಹಲವು ಯೋಧರು ಮೃತಪಟ್ಟರು. ಈ ರೀತಿ ತನ್ನ ನೆರೆ ರಾಷ್ಟ್ರಗಳೊಂದಿಗೆ ಮಾತ್ರವಲ್ಲ, ಆಸ್ಟ್ರೇಲಿಯಾ, ಜಪಾನ್‌, ವಿಯೆಟ್ನಾಂ ಹಾಗೂ ಫಿಲಿಪ್ಪೀನ್ಸ್‌ನೊಂದಿಗೂ ಚೀನಾ ಕಳೆದ ವರ್ಷ ಸಂಘರ್ಷ ನಡೆಸಿತ್ತು’ ಎಂದು ಹಿಕ್ಸ್ ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು