ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ–ಲಾವೋಸ್‌ ರೈಲು ಸಂಚಾರ ಆರಂಭ

Last Updated 3 ಡಿಸೆಂಬರ್ 2021, 15:00 IST
ಅಕ್ಷರ ಗಾತ್ರ

ಬೀಜಿಂಗ್/ವಿಯೆಂಟಿಯಾನ್‌: ಬೆಲ್ಟ್‌ ಆ್ಯಂಡ್ರೋಡ್‌ ಇನಿಶಿಯೇಟಿವ್ (ಬಿಆರ್‌ಐ) ಯೋಜನೆಯಡಿ ಚೀನಾವು ಲಾವೋಸ್‌ ದೇಶಕ್ಕೆ ಶುಕ್ರವಾರ ತನ್ನ ಮೊದಲ ಗಡಿಯಾಚೆಗಿನ (ಅಂತರರಾಷ್ಟ್ರೀಯ) ರೈಲನ್ನು ಆರಂಭಿಸಿತು.

ಆಗ್ನೇಯ ಏಷ್ಯಾದ ಸಣ್ಣ ದೇಶವಾದ ಲಾವೋಸ್‌ ಅನ್ನು ಒಂದು ಪ್ರಾದೇಶಿಕ ಸಂಪರ್ಕ ಹೊಂದಿದ ಕೇಂದ್ರವನ್ನಾಗಿಸಲು ಇದು ಸಹಾಯಕವಾಗಿದೆ ಎಂದು ಚೀನಾ ಹೇಳಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮತ್ತು ಲಾವೋಸ್‌ನ ಥೋಂಗ್ಲೌನ್‌ ಸಿಸೌಲಿತ್‌ ಅವರು ಜಂಟಿಯಾಗಿ ಆನ್‌ಲೈನ್‌ ಮೂಲಕ ಚೀನಾ–ಲಾವೋಸ್‌ ರೈಲು ಮಾರ್ಗದ ಉದ್ಘಾಟನೆಗೆ ಸಾಕ್ಷಿಯಾದರು.

ಗಡಿಯಾಚೆಗಿನ ರೈಲು ಮಾರ್ಗದ ಅಧಿಕೃತ ಉದ್ಘಾಟನೆಯ ನಂತರ ಚೀನಾ–ಲಾವೋಸ್‌ ರೈಲ್ವೆಯ ಮೊದಲ ರೈಲು ವಿಯೆಂಟಿಯಾನ್‌ನಿಂದ ಹೊರಟಿತು. 1,035 ಕಿ.ಮೀ. ಉದ್ದದ ರೈಲು ಮಾರ್ಗ ಇದಾಗಿದ್ದು, ಸಂಪೂರ್ಣ ವಿದ್ಯುಚ್ಛಕ್ತಿಯಿಂದ ಚಲಿಸುವ ರೈಲು 10 ಗಂಟೆಯ ಅವಧಿಯಲ್ಲಿ ಚೀನಾದ ಯುನಾನ್ ಪ್ರಾಂತ್ಯದಿಂದವಿಯೆಂಟಿಯಾನ್‌ ತಲುಪುತ್ತದೆಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಾವೋಸ್‌ ಚೀನಾದ ಹೊರತಾಗಿ ವಿಯೆಟ್ನಾಂ, ಥಾಯ್ಲೆಂಡ್‌, ಮ್ಯಾನ್ಮಾರ್‌ ಮತ್ತು ಕಾಂಬೋಡಿಯಾ ದೇಶಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಇವುಗಳಿಗೂ ರೈಲು ಮಾರ್ಗವನ್ನು ವಿಸ್ತರಿಸುವಂತೆ ಲಾವೋಸ್‌ ಬೀಜಿಂಗ್‌ಗೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT