ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಭದ್ರತೆಗೆ ಅಪಾಯ ಇರುವ ಬಗ್ಗೆ ಮಾಹಿತಿ ನೀಡುವ ನಾಗರಿಕರಿಗೆ ಬಹುಮಾನ

Last Updated 8 ಜೂನ್ 2022, 12:29 IST
ಅಕ್ಷರ ಗಾತ್ರ

ಬೀಜಿಂಗ್‌: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಬೆದರಿಕೆ ಅಥವಾ ಅಪಾಯ ಇರುವ ಬಗ್ಗೆ ಮಾಹಿತಿ ನೀಡುವ ತನ್ನ ದೇಶದ ನಾಗರಿಕರಿಗೆ ಸುಮಾರು 1,00,000 ಯೆನ್‌ (₹11,61,427) ನಗದು ಬಹುಮಾನ ನೀಡುವುದಾಗಿ ಚೀನಾ ಸರ್ಕಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಚೀನಾದ ಸರ್ಕಾರಿ ಸ್ವಾಮ್ಯದ ಲೀಗಲ್‌ ಡೇಲಿ ಪತ್ರಿಕೆ, ‘ರಾಷ್ಟ್ರೀಯ ಭದ್ರತೆಗೆ ಅಪಾಯ ಇರುವ ಬಗ್ಗೆ ಮಾಹಿತಿ ನೀಡಿದ‌ ಹಾಗೂ ಇಂತಹ ಪ್ರಕರಣಗಳನ್ನು ತಡೆಯಲು ಅಥವಾ ನಿವಾರಿಸಲು ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಹಾಯ ಮಾಡುವ ನಾಗರಿಕರಿಗೆ ಅವರ ಪಾತ್ರಕ್ಕೆ ಅನುಗುಣವಾಗಿ ಪ್ರಮಾಣಪತ್ರ ಸಹಿತ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದೆ.

ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರಿಗೆ ಚೀನಾದ ಭದ್ರತಾ ಸಚಿವಾಲಯ ಹಲವು ವರ್ಷಗಳಿಂದ ನಗದು ಬಹುಮಾನ ನೀಡುತ್ತಾ ಬಂದಿದೆ. ಆದರೆ, ಜನರಲ್ಲಿ ಈ ಚಟುವಟಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಭದ್ರತಾ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ ಎಂದು ಲೀಗಲ್‌ ಡೇಲಿ ‌ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT