ಶನಿವಾರ, ಜೂನ್ 19, 2021
26 °C

ಜೈವಿಕ ಅಸ್ತ್ರವಾಗಿ ಕೊರೊನಾ: 2015ರಲ್ಲಿ ಚೀನಾ ಪ್ರಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌/ಮೆಲ್ಬರ್ನ್‌: ಕೋವಿಡ್‌ –19 ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವುದಕ್ಕೂ ಐದು ವರ್ಷಗಳ ಹಿಂದೆ ಚೀನಾದ ಮಿಲಿಟರಿ ವಿಜ್ಞಾನಿಗಳು ಕೊರೊನಾ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಕೆ ಮಾಡುವ ಬಗ್ಗೆ ಪ್ರಯೋಗ ನಡೆಸಿದ್ದರು. ಅಲ್ಲದೆ ಮೂರನೇ ವಿಶ್ವಮಹಾಯುದ್ಧವು ಜೈವಿಕ ಅಸ್ತ್ರಗಳೊಂದಿಗೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯ (ಪಿಎಲ್‌ಎ) ಅಧಿಕಾರಿಗಳು ಇಂತಹ ಭವಿಷ್ಯ ನುಡಿದಿರುವ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆಯಿಂದ ಪಡೆದ ದಾಖಲೆಗಳನ್ನು ಉಲ್ಲೇಖಿಸಿ ‘ದಿ ಆಸ್ಟ್ರೇಲಿಯನ್‌‘ ಪತ್ರಿಕೆಯು ವರದಿ ಮಾಡಿದೆ ಎಂದು ಬ್ರಿಟನ್‌ನ ‘ದಿ ಸನ್‌’ ಪತ್ರಿಕೆಯು ತನ್ನ ವರದಿಯಲ್ಲಿ ಹೇಳಿದೆ.

ಕೋವಿಡ್‌–19ರ ಮೂಲದ ಬಗ್ಗೆ ನಡೆಸಿದ ಪ್ರಯೋಗದ ಕುರಿತು ಚೀನಾದ ಆರೋಗ್ಯ ಅಧಿಕಾರಿಗಳು ಮತ್ತು ಮಿಲಿಟರಿ ವಿಜ್ಞಾನಿಗಳು ಬರೆದಿದ್ದಾರೆ ಎನ್ನಲಾದ ಬರಹಗಳನ್ನು ಅಮೆರಿಕದ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು