ಗುರುವಾರ , ಡಿಸೆಂಬರ್ 8, 2022
18 °C

ಚೀನಾದಲ್ಲಿ ಕೋವಿಡ್‌ ಏರಿಕೆ: ಒಂದೇ ದಿನ 29 ಸಾವಿರ ಹೊಸ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂಗೈ: ಚೀನಾದಲ್ಲಿ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಮಂಗಳವಾರ ಒಂದೇ ದಿನ 29,157 ಪ್ರಕರಣಗಳು ದಾಖಲಾಗಿವೆ.

ಇದರಲ್ಲಿ 2,719 ಪ್ರಕರಣಗಳಲ್ಲಿ ರೋಗದ ಲಕ್ಷಣಗಳಿದ್ದರೆ, 26,438 ಪ್ರಕರಣಗಳು ಲಕ್ಷಣ ರಹಿತವಾಗಿವೆ. ಸೋಮವಾರ 28,127 ಪ್ರಕರಣಗಳು ದಾಖಲಾಗಿದ್ದವು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಬುಧವಾರ ಹೇಳಿದೆ.  

ನ.22ರವರೆಗೆ ಚೀನಾದಲ್ಲಿ ಕೋವಿಡ್‌ ಸೋಂಕು ಲಕ್ಷಣದ 2,93,500 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಹೊಸ ಪ್ರಕರಣಗಳು ದಾಖಲಾಗಿಲ್ಲ. ಬೀಜಿಂಗ್‌, ಶಾಂಘೈ, ಗುವಾಂಗೌ ಹಾಗೂ ಚಾಂಗ್‌ಕಿಂಗ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು