ಶನಿವಾರ, ಮೇ 15, 2021
25 °C

ಕೋವಿಡ್‌ ಸಮಸ್ಯೆ: ಭಾರತಕ್ಕೆ ನೆರವು ನೀಡಲು ಸಿದ್ಧ –ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸುವ ಕುರಿತಂತೆ ತಾನು ಭಾರತದ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ಚೀನಾ ಶುಕ್ರವಾರ ಹೇಳಿದೆ. ಭಾರತ ಮತ್ತು ಭಾರತೀಯರಿಗೆ ಸಮಸ್ಯೆ ಎದುರಿಸಲು ಅಗತ್ಯ ನೆರವು ಒದಗಿಸಲು ತಾನು ಸಿದ್ಧವಿರುವುದಾಗಿಯೂ ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌ ಅವರು, ಭಾರತದಲ್ಲಿ ಇತ್ತೀಚಿಗೆ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಆಗಿರುವುದಕ್ಕೆ ನಮಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿದರು.

‘ಭಾರತದ ಅಗತ್ಯವನ್ನು ಪರಿಗಣಿಸಿ ನಾವು ನೆರವು ನೀಡಲಿದ್ದೇವೆ. ಈ ಸಂಬಂಧ ನವದೆಹಲಿಯ ಜೊತೆಗೆ ಸಂಪರ್ಕದಲ್ಲಿ ಇದ್ದೇವೆ. ಈಗಿನ ಸಮಸ್ಯೆಯಿಂದ ಭಾರತೀಯರು ಖಂಡಿತವಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು