ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಉಗಮ ಪತ್ತೆ: ಮುಕ್ತ, ಪಾರದರ್ಶಕವಾಗಿರುವುದಾಗಿ ಹೇಳಿದ ಚೀನಾ

Last Updated 28 ಫೆಬ್ರುವರಿ 2023, 13:18 IST
ಅಕ್ಷರ ಗಾತ್ರ

ಬೀಜಿಂಗ್: ಕೋವಿಡ್‌–19 ಉಗಮವಾಗಿದ್ದು ಎಲ್ಲಿಂದ ಎಂಬುದನ್ನು ಪತ್ತೆ ಮಾಡುವುದಕ್ಕೆ ಸಂಬಂಧಿಸಿ ತಾನು ಮುಕ್ತ ಹಾಗೂ ಪಾರದರ್ಶಕವಾಗಿಯೇ ನಡೆದುಕೊಳ್ಳುತ್ತಿರುವುದಾಗಿ ಚೀನಾ ಮಂಗಳವಾರ ಹೇಳಿದೆ.

ಈ ಪಿಡುಗಿನ ಉಗಮ ಸ್ಥಾನ ಕುರಿತು ಅಮೆರಿಕದ ಟೀಕೆಗಳನ್ನು ತಳ್ಳಿ ಹಾಕಿರುವ ಚೀನಾ, ಈ ವಿಷಯವನ್ನು ಅಮೆರಿಕ ರಾಜಕೀಯಗೊಳಿಸುತ್ತಿದೆ ಎಂದು ಕಿಡಿ ಕಾರಿದೆ.

‘ಕೊರೊನಾ ವೈರಸ್‌ ಸೋಂಕು ಕುರಿತು ಚೀನಾದಲ್ಲಿ ವ್ಯಾಪಕ ಸಂಶೋಧನೆ ನಡೆಸಲಾಗಿದೆ. ಫಲಿತಾಂಶಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ವಿಶ್ವದ ಇತರೆಡೆ ನಡೆದ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಲಾಗಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಮಾವೊ ನಿಂಗ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ವೈರಸ್‌ ಪ್ರಸರಣದ ಮೂಲವನ್ನು ಹುಡುಕುವ ವಿಷಯವನ್ನು ರಾಜಕೀಯಗೊಳಿಸುವುದರಿಂದ ಚೀನಾಕ್ಕೆ ಕಳಂಕ ತಟ್ಟುವುದಿಲ್ಲ. ಇಂಥ ಪ್ರಯತ್ನಗಳಿಂದ ಅಮೆರಿಕದ ವಿಶ್ವಾಸಾರ್ಹತೆಗೇ ಧಕ್ಕೆಯಾಗಲಿದೆ’ ಎಂದು ನಿಂಗ್‌ ಅಭಿಪ್ರಾಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT