ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತ್ತೀಚಿನ ವರ್ಷಗಳಲ್ಲಿ ಚೀನಾ ನಡವಳಿಕೆ ಕಳವಳಕಾರಿಯಾಗಿದೆ: ರಿಷಿ ಸುನಕ್

Last Updated 14 ಮಾರ್ಚ್ 2023, 3:16 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಲ್ಲಿ ಚೀನಾದ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಆಕಸ್ ಒಪ್ಪಂದದ ಕುರಿತಾದ ಚರ್ಚೆಗೆ ಅಮೆರಿಕಕ್ಕೆ ಆಗಮಿಸಿರುವ ಅವರು, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೌಲ್ಯಗಳು ಬ್ರಿಟನ್‌ಗಿಂತಲೂ ಹೆಚ್ಚು ಭಿನ್ನವಾಗಿವೆ ಎಂದು ಪ್ರತಿಪಾದಿಸಿದ್ದಾರೆ.

‘ಚೀನಾ ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದ್ದು, ಇಡೀ ವಿಶ್ವಕ್ಕೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ದೇಶವು ಮೂಲಭೂತವಾಗಿ ವಿಭಿನ್ನ ಮೌಲ್ಯಗಳನ್ನು ಹೊಂದಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಅದರ ನಡವಳಿಕೆಯು ಕಳವಳಕಾರಿಯಾಗಿದೆ’ಎಂದು ಸುನಕ್ ತನ್ನ ಪ್ರವಾಸದ ಸಮಯದಲ್ಲಿ ಸ್ಕೈ ನ್ಯೂಸ್‌ಗೆ ತಿಳಿಸಿದರು.

ಬ್ರಿಟನ್ ಈಗ ತನ್ನ ಸ್ಥಾನಕ್ಕೆ ಮರಳಿದೆ. ಚೀನಾ ಒಡ್ಡುವ ಸವಾಲನ್ನು ಹೆಚ್ಚು ದೃಢವಾಗಿ ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಇಂಡೊ-ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಪ್ರಭಾವವನ್ನು ಇತರ ರಕ್ಷಣಾ ಪಾಲುದಾರ ದೇಶಗಳ ನೆರವಿನೊಂದಿಗೆ ಎದುರಿಸಲು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಯೋಜಿಸಿವೆ.

ಆಕಸ್ ಒಪ್ಪಂದವನ್ನು ಘೋಷಿಸಿದ 18 ತಿಂಗಳ ನಂತರ, ಅದರ ಉಪಕ್ರಮಗಳನ್ನು ಅನುಮೋದಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆ್ಯಂಟನಿ ಅಲ್ಬನೀಸ್ ಅಮೆರಿಕಕ್ಕೆ ತೆರಳಿದ್ದಾರೆ.
ಮಹತ್ವಾಕಾಂಕ್ಷೆಯ ರಕ್ಷಣಾ ಪಾಲುದಾರಿಕೆಯು ಏಷ್ಯಾದಲ್ಲಿ ಚೀನಾದ ಮಿಲಿಟರಿ ನಿಯೋಜನೆಯನ್ನು ಎದುರಿಸುವ ಪ್ರಯತ್ನದ ಭಾಗವಾಗಿ ಕ್ಯಾನ್‌ಬೆರಾಗೆ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಆಕಸ್ ಜಲಾಂತರ್ಗಾಮಿ ಒಪ್ಪಂದವು ಪರಮಾಣು ಪ್ರಸರಣದ ಅಸ್ಪಷ್ಟ ಕ್ರಿಯೆ ಎಂದು ಚೀನಾ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT