ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಯಶಸ್ವಿಯಾಗಿ ಹಿಂತಿರುಗಿದ ಮರುಬಳಕೆ ಮಾಡಬಹುದಾದ ಗಗನನೌಕೆ

Last Updated 6 ಸೆಪ್ಟೆಂಬರ್ 2020, 10:49 IST
ಅಕ್ಷರ ಗಾತ್ರ

ಬೀಜಿಂಗ್‌:ಚೀನಾ ಉಡ್ಡಯನ ಮಾಡಿದ್ದ ಮರು ಬಳಕೆ ಮಾಡಬಹುದಾದ ಪ್ರಾಯೋಗಿಕ ಗಗನನೌಕೆ, ಪೂರ್ವನಿಗದಿತ ನಿಲ್ದಾಣದಲ್ಲಿ ಯಶಸ್ವಿಯಾಗಿ ಭಾನುವಾರ ಬಂದಿಳಿಯಿತು.

ಮರುಬಳಕೆಯ ಗಗನನೌಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಈ ಸಾಧನೆ ಹೊಸ ಮೈಲುಗಲ್ಲು. ಭವಿಷ್ಯದಲ್ಲಿ ಬಾಹ್ಯಾಕಾಶವನ್ನು ಕಡಿಮೆ ವೆಚ್ಚದಲ್ಲಿ ತಲುಪಿ, ಉದ್ದೇಶಿತ ಕಾರ್ಯಾಚರಣೆಗೆ ಬಳಸಲು ಇದರಿಂದ ಸಾಧ್ಯವಾಗಲಿದೆ ಎಂದು ಸರ್ಕಾರಿ ಒಡೆತನದ ಸಿಜಿಟಿಎನ್‌ ಚಾನೆಲ್‌ ವರದಿ ಮಾಡಿದೆ.

ಈ ಗಗನನೌಕೆಯನ್ನು ಜಿಯುಕ್ವಾನ್‌ ಸೆಟಲೈಟ್‌ ಲಾಂಚ್‌ ಸೆಂಟರ್‌ನಿಂದ ಶುಕ್ರವಾರ ಉಡ್ಡಯನ ಮಾಡಲಾಗಿತ್ತು.

ಗಗನನೌಕೆಯ ಉಡ್ಡಯನದ ಬಗ್ಗೆ ಚೀನಾದ ಮಿಲಿಟರಿ ಅಧಿಕಾರಿಗಳುಇದುವರೆಗೂ ತುಟಿ ಬಿಚ್ಚಿರಲಿಲ್ಲ. ಭಾನುವಾರ ಇದು ಹಿಂತಿರುಗಿದ ನಂತರ ಮಾತನಾಡಿರುವ ಅವರು, ‘ಈ ಉಡ್ಡಯನ ಕಾರ್ಯಕ್ರಮ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಗಗನನೌಕೆ ಹೊಸದು, ಅದನ್ನು ಉಡ್ಡಯನ ಮಾಡಿದ ವಿಧಾನವೂ ವಿಭಿನ್ನ’ ಎಂದಷ್ಟೇ ಹೇಳಿದ್ದಾರೆ.

ಈ ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರ ನೀಡಲು ಅಧಿಕಾರಿಯೊಬ್ಬರು ನಿರಾಕರಿಸಿದ್ದಾಗಿ ಹಾಂಗ್‌ಕಾಂಗ್‌ ಮೂಲದ ಸೌಥ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.‘ಅಮೆರಿಕದ ಎಕ್ಸ್‌–37ಬಿ ಜೊತೆ ಚೀನಾ ಗಗನನೌಕೆಯನ್ನು ಹೋಲಿಕೆ ಮಾಡಬಹುದು ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ’ ಎಂದೂ ವರದಿ ಮಾಡಿದೆ.

ಎಕ್ಸ್‌–37ಬಿ ಎಂಬುದು ಮಾನವರಹಿತ, ಪುಟ್ಟ ಗಗನನೌಕೆ. ರಾಕೆಟ್‌ ನೆರವಿನಿಂದ ಉಡ್ಡಯನ ಮಾಡಿದ್ದ ಈ ಬಾಹ್ಯಾಕಾಶನೌಕೆ ಹಿಂತಿರುಗಿದಾಗ ರನ್‌ವೇದಲ್ಲಿ ಲ್ಯಾಂಡ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT