ಬೀಜಿಂಗ್:ಚೀನಾದ ಶಾಂಘೈ ಬಳಿಯ ದೊಡ್ಡ ಕೈಗಾರಿಕಾ ಪ್ರಾಂತ್ಯ ಝೆಜಿಯಾಂಗ್ ನಗರದಲ್ಲಿ ನಿತ್ಯ 10 ಲಕ್ಷ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ.ಮುಂದಿನ ದಿನಗಳಲ್ಲಿ ಇದು ದ್ವಿಗುಣವಾಗುವ ನಿರೀಕ್ಷೆ ಇದೆ ಎಂದು ಪ್ರಾಂತೀಯ ಸರ್ಕಾರ ಭಾನುವಾರ ತಿಳಿಸಿದೆ.

‘ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಅಂದಾಜಿಗಿಂತಲೂ ಮೊದಲೇ ಝೆಜಿಯಾಂಗ್ ನಗರದಲ್ಲಿ ಹೊಸ ವರ್ಷದ ದಿನಕ್ಕೆ ಸೋಂಕು ಉತ್ತುಂಗದ ಸ್ಥಿತಿಗೆ ತಲುಪಲಿದೆ. ಈ ವೇಳೆಗೆ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ತಲುಪಲಿದೆ’ ಎಂದುಅದು ತಿಳಿಸಿದೆ.

ಝೆಜಿಯಾಂಗ್‌ನ ಜ್ವರ ಚಿಕಿತ್ಸಾಲಯಗಳಿಗೆ ಬರುತ್ತಿರುವವರ ಸಂಖ್ಯೆ ನಿತ್ಯ 4,08,400 ಪ್ರಕರಣಗಳು ವರದಿಯಾಗಿವೆ. ಇದು ಕಳೆದ ವಾರದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ 14 ಪಟ್ಟು ಹೆಚ್ಚಾಗಿದೆ ಎಂದು ಝೆಜಿಯಾಂಗ್ ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ:ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದ ನಿತ್ಯದ ಅಂಕಿಅಂಶ ಪ್ರಕಟಣೆ ನಿಲ್ಲಿಸಿದ ಚೀನಾ

‘ಕೋವಿಡ್ ರೋಗದ ಪಿಡುಗು ಕ್ಷಿಪ್ರಗತಿಯಲ್ಲಿ ಆವರಿಸುತ್ತಿರುವ ಚೀನಾಕ್ಕೆ ಮುಂಬರುವ ವಾರಗಳು ಅತ್ಯಂತ ಅಪಾಯಕಾರಿಯಾಗಿರಲಿವೆ’ ಎಂದು ಕ್ಯಾಪಿಟಲ್ ಎಕನಾಮಿಕ್ಸ್‌ನ ಸಂಶೋಧನಾ ಟಿಪ್ಪಣಿ ಎಚ್ಚರಿಸಿದೆ.

‘ಸೋಂಕು ಹರಡುವಿಕೆ ವೇಗ ತಗ್ಗಿಸಲು ಚೀನಿ ಅಧಿಕಾರಿಗಳು ಈಗ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಚಂದ್ರಮಾನ ಹೊಸ ವರ್ಷಕ್ಕೆ ಮುಂಚಿತವಾಗಿ ಜನರ ವಲಸೆ ಆರಂಭವಾಗಿರುವುದರಿಂದ, ಸದ್ಯ ದೇಶದ ಯಾವ ಭಾಗದಲ್ಲಿ ದೊಡ್ಡ ಅಲೆ ಕಾಣಿಸಿಲ್ಲವೋ ಅಲ್ಲಿ ಕೋವಿಡ್ ದೊಡ್ಡ ಅಲೆ ಎದುರಾಗಲಿದೆ’ ಎಂದುಕ್ಯಾಪಿಟಲ್ ಎಕನಾಮಿಕ್ಸ್‌ನ ತಜ್ಞರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.