ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಚೀನಾ ದೊಡ್ಡ ಎಡವಟ್ಟು ಮಾಡಿದೆ ಎಂದ ಆ ದೇಶದ ಸೇನೆಯ ಮಾಜಿ ನಾಯಕನ ಮಗಳು!

ಅಕ್ಷರ ಗಾತ್ರ

ಬೀಜಿಂಗ್: ಚೀನಾ ಸೇನೆಯ (ಪಿಎಲ್‌ಎ) ಉನ್ನತ ನಾಯಕರಾಗಿದ್ದ ಲಾವೊ ರುಕಿಂಗ್ ಎನ್ನವುವರಮಗಳು ಚೀನಾ ಕೋವಿಡ್ ನಿರ್ವಹಣೆಯಲ್ಲಿ ತೋರಿದ ಅವಸ್ಥೆಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಷಿ ಜಿನ್‌ ಪಿಂಗ್ ಅವರ ಹೆಸರನ್ನು ಉಲ್ಲೇಖಿಸದೇ ಅವರ ಕಾರ್ಯದರ್ಶಿಗೆ ಪತ್ರ ಬರೆದಿರುವಲಾವೊ ರುಕಿಂಗ್ ಅವರ ಮಗಳು ಲಾವೊ ಡಯಾಂಡಿಯನ್ ಎನ್ನುವರು ಕೊರೊನಾವೈರಸ್‌ನ ರೋಗನಿರ್ಣಯ ಹಾಗೂ ಚಿಕಿತ್ಸಾ ಯೋಜನೆಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ

ಲಾವೊ ಡಯಾಂಡಿಯನ್ ಅವರು ಬರೆದಿರುವ ಈ ಪತ್ರ ಚೀನಾದಲ್ಲಿ ಸ್ಪೋಟಕ ಸುದ್ದಿ ಎಂದು ಹೇಳಲಾಗಿದ್ದು ಹಾಂಗ್‌ಕಾಂಗ್‌ ಸೇರಿದಂತೆ ಚೀನಾದ ಅನೇಕ ಕಡೆ ವೈರಲ್ ಆಗಿದೆ.

ಚೀನಾ ಕೈಗೊಂಡಿದ್ದ ಎಲ್ಲ ಯೋಜನೆಗಳು ಮಾರಕ ಕೊರೊನಾವೈರಸ್‌ನ ರೂಪಾಂತರಿಗಳನ್ನು ತಡೆಯುವ ಯೋಜನೆಯನ್ನು ಹೊಂದಿರಲಿಲ್ಲ. ಇದರಿಂದ ಜನ ಬಹಳಷ್ಟು ತ್ರಾಸಪಟ್ಟರು. ಬಿಜಿಂಗ್ ಆಡಳಿತ ಮಾಡಿರುವ ಎಡವಟ್ಟುಗಳು ಸಮಸ್ಯೆಗಳನ್ನು ವೃತ್ತಿಪರರು ನಿರ್ವಹಿಸುತ್ತಾರೆ ಎಂಬುದನ್ನು ಹುಸಿಗೊಳಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾರ್ಯಕಾರಿ ಆದೇಶಗಳನ್ನು ಅನುಸರಿಸಲು ಕಮ್ಯುನಿಷ್ಟ್ ಪಾರ್ಟಿಯ ವ್ಯವಸ್ಥೆಯನ್ನು ನೇರವಾಗಿ ಬಳಸಿರುವುದು ಸರಿಯಲ್ಲ ಎಂದು ಲಾವೊ ಡಯಾಂಡಿಯನ್ ಆರೋಪಿಸಿದ್ದಾರೆ.

ಲಾವೊ ರುಕಿಂಗ್ ಅವರು 1962 ರ ಭಾರತ– ಚೀನಾ ಯುದ್ಧದಲ್ಲಿ ಪಿಎಲ್‌ಎ ಅನ್ನು ಮುನ್ನಡೆಸಿದ್ದರು. ಬಳಿಕ ಸೇನೆಯ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಭಾರತ–ಚೀನಾ ಯುದ್ಧದಲ್ಲಿ ಚೀನಾಕ್ಕೆ ಜಯವಾಗಿತ್ತು. ಸಹಜವಾಗಿ ಚೀನಾದಲ್ಲಿ ಸರ್ಕಾರದ ವಿರುದ್ಧ ಟೀಕೆಗಳು ಕಡಿಮೆ. ಹೀಗಿದ್ದೂ ಸೇನೆಯ ಉನ್ನತ ನಾಯಕರಾಗಿದ್ದವ ಮಗಳೇ ಈ ರೀತಿ ಚೀನಾ ಸರ್ಕಾರದ ವಿರುದ್ಧ ಆರೋಪ ಮಾಡಿರುವುದು ಗಮನ ಸೆಳೆದಿದೆ ಎಂದು ‘ದಿ ಹಿಂದೂಸ್ತಾನ್ ಟೈಮ್ಸ್’ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT