ಶುಕ್ರವಾರ, ಜುಲೈ 1, 2022
28 °C

ಭ್ರಷ್ಟಾಚಾರ ಪ್ರಕರಣ: ಆಂಗ್ ಸಾನ್‌ ಸೂಕಿಗೆ ಐದು ವರ್ಷ ಜೈಲು ಶಿಕ್ಷೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

DH FILE

ಬ್ಯಾಂಕಾಕ್: ಮಿಲಿಟರಿ ಆಡಳಿತದ ಮ್ಯಾನ್ಮಾರ್‌ನಲ್ಲಿನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

ಆಂಗ್ ಸಾನ್ ಸೂಕಿ (76) ವಿರುದ್ಧದ 11 ಭ್ರಷ್ಟಾಚಾರ ಪ್ರಕರಣಗಳ ಪೈಕಿ, ಒಂದೊಂದಾಗಿ ವಿಚಾರಣೆ ನಡೆಯುತ್ತಿದೆ.

ಹೋರಾಟಗಾರ್ತಿಯಾಗಿದ್ದ ಆಂಗ್ ಸಾನ್ ಸೂಕಿ ಅವರನ್ನು 2021ರಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ನಂತರದಲ್ಲಿ ಮಿಲಿಟರಿ ಆಡಳಿತ ಹೇರಲಾಗಿದೆ.

ಆಂಗ್ ಸಾನ್ ಸೂಕಿ ವಿರುದ್ಧ ಕನಿಷ್ಠ 18 ವಿವಿಧ ಅಪರಾಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಗರಿಷ್ಠ 190 ವರ್ಷ ಜೈಲು ಶಿಕ್ಷೆಯಾಗಲಿದೆ.

ತಮ್ಮ ವಿರುದ್ಧದ ಆರೋಪಗಳನ್ನು ಸೂಕಿ ನಿರಾಕರಿಸುತ್ತಲೇ ಬಂದಿದ್ದು, ಅವುಗಳನ್ನು ಅಸಂಬದ್ಧ ಎಂದು ಕರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು