ಶನಿವಾರ, ಮೇ 28, 2022
22 °C

ಕೋವಿಡ್‌ನಿಂದ ಗುಣಮುಖರಾದವರಲ್ಲಿ ಎರಡು ವರ್ಷಗಳ ಬಳಿಕವೂ ರೋಗಲಕ್ಷಣ: ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೋವಿಡ್‌ –19 ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ಎರಡು ವರ್ಷಗಳ ಬಳಿಕವೂ ಕನಿಷ್ಠ ಒಂದು ರೋಗ ಲಕ್ಷಣವನ್ನು ಹೊಂದಿದ್ದಾರೆ ಎಂದು ದಿ ಲ್ಯಾನ್ಸೆಟ್‌ ರೆಸ್ಪಿರೇಟರಿ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು ಬಹಿರಂಗಪಡಿಸಿದೆ.

2020ರ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಚೀನಾದಲ್ಲಿ ಸೋಂಕಿಗೊಳಗಾಗಿದ್ದ 1,192 ಮಂದಿಯು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಕಾಲಾ ನಂತರ ಸುಧಾರಿಸಿದ್ದರೂ, ಇವರ ಆರೋಗ್ಯ ಸ್ಥಿತಿಯು ಸಾಮಾನ್ಯ ಜನರ ಆರೋಗ್ಯ ಸ್ಥಿತಿಗಿಂತ ಕೆಳಮಟ್ಟದಲ್ಲಿತ್ತು ಎಂದೂ ಹೇಳಲಾಗಿದೆ.

‘2 ವರ್ಷಗಳ ಹಿಂದೆ ಕೋವಿಡ್‌ ಬಾಧಿಸಿದ್ದವರಲ್ಲಿ ಈಗಲೂ ಆಯಾಸ, ಉಸಿರಾಟದ ತೊಂದರೆ, ನಿದ್ರಾಹೀನತೆ ಸೇರಿದಂತೆ ಯಾವುದಾದರೂ ಒಂದು ಲಕ್ಷಣ ಕಾಣಿಸಿಕೊಳ್ಳುತ್ತಿದೆ’ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು