ಸೋಮವಾರ, ಸೆಪ್ಟೆಂಬರ್ 20, 2021
23 °C

ಭಾರತ-ಬ್ರಿಟನ್‌ ಕೊರೊನಾ ತಳಿಯ ಸಂಯೋಜನೆಯಿಂದ ಹೊಸ ತಳಿ: ವಿಯೇಟ್ನಾಂನಲ್ಲಿ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಹನೋಯಿ: ವಿಯೆಟ್ನಾಂನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿಯೊಂದು ಪತ್ತೆಯಾಗಿದೆ.

ಈ ಹೊಸ ವೈರಸ್‌ ಭಾರತ ಮತ್ತು ಬ್ರಿಟನ್‌ನಲ್ಲಿ ಈ ಮೊದಲು ಪತ್ತೆಯಾದ ಕೊರೊನಾ ವೈರಸ್‌ನ ಹೈಬ್ರೀಡ್‌ (ಸಂಕರಗೊಂಡ) ತಳಿಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ.

ಇತ್ತೀಚಿನ ಕೆಲವು ಸೋಂಕಿತರಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಪತ್ತೆಯಾದ ವೈರಸ್‌ನ ಆನುವಂಶಿಯತೆಯನ್ನು ಪರೀಕ್ಷಿಸುವಾಗ ವಿಜ್ಞಾನಿಗಳಿಗೆ ಈ ರೂಪಾಂತರಿ ತಳಿ ಪತ್ತೆಯಾಗಿದೆ. ಈ ಹಿಂದಿನ ವೈರಸ್‌ನ ಇತರೆಲ್ಲ ತಳಿಗಳಿಗಿಂತಲೂ ಈ ತಳಿ ಅತಿ ಸುಲಭವಾಗಿ ಹರಡುತ್ತದೆ ಎಂದು ಆರೋಗ್ಯ ಸಚಿವ ನ್ಗುಯೇನ್ ಥಾನ್ ಲಾಂಗ್ ಶನಿವಾರ ಹೇಳಿದ್ದಾರೆ.

ಹೊಸ ರೂಪಾಂತರ ತಳಿಯು ವಿಯೆಟ್ನಾಂನ 63 ನಗರಗಳ ಪೈಕಿ 30 ನಗರ, ಪ್ರಾಂತ್ಯಗಳಿಗೆ ಹರಡಿದೆ. ಇದರಿಂದಾಗಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಚಿವ ಲಾಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ವೈರಸ್‌ಗಳಲ್ಲಿ ಆಗಾಗ್ಗೆ ಸಣ್ಣ ಪ್ರಮಾಣದ ಆನುವಂಶಿಯ ಬದಲಾವಣೆಗಳಾಗುತ್ತವೆ. 2019ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಈ ವರೆಗೆ ರೂಪಾಂತರಗೊಳ್ಳುತ್ತಿರುವುದೂ ಇದಕ್ಕೆ ಸಾಕ್ಷಿ.

ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಲ್ಲಿ ನಾಲ್ಕು ಆತಂಕಕಾರಿ ರೂಪಾಂತರ ತಳಿಗಳನ್ನು ಪಟ್ಟಿ ಮಾಡಿದೆ. ಬ್ರಿಟನ್‌, ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಸದ್ಯ ಜಗತ್ತಿಗೆ ಸವಾಲಾಗಿ ಪರಿಣಮಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು