ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ

Last Updated 12 ಆಗಸ್ಟ್ 2020, 3:53 IST
ಅಕ್ಷರ ಗಾತ್ರ

ಮ್ಯಾಡ್ರಿಡ್: ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತಂದು ಏಳು ವಾರಗಳ ನಂತರ ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ.

ಪಶ್ಚಿಮ ಯುರೋಪಿನಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ದೇಶವಾಗಿದೆ ಈಗ ಸ್ಪೇನ್. ಕಳೆದ ವಾರ ಇಲ್ಲಿ ಪ್ರತಿದಿನ ಸರಾಸರಿ 4,923 ಹೊಸ ಪ್ರಕರಣಗಳು ಪತ್ತೆಯಾಗಿವೆ.ಇದು ಬ್ರಿಟನ್, ಫ್ರಾನ್ಸ್ , ಜರ್ಮನಿ ಮತ್ತು ಇಟಲಿಯಿಂದ ಅಧಿಕಆಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಇಲ್ಲಿ ಈಗ ಸೋಂಕಿತರ ಸಂಖ್ಯೆ 3,23,000 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹಲವಾರು ದೇಶಗಳು ಸ್ಪೇನ್‌ಗೆ ಪ್ರಯಾಣ ಮಾಡಬಾರದು ಎಂದು ನಿರ್ಬಂಧ ವಿಧಿಸಿವೆ.

4 ವಾರಗಳಲ್ಲಿ ಅಮೆರಿಕದ ಮಕ್ಕಳಿಗೆ ಸೋಂಕು ಪ್ರಕರಣ ಶೇ.90ರಷ್ಟು ಏರಿಕೆ
ಕಳೆದ ಒಂದು ತಿಂಗಳಲ್ಲಿ ಅಮೆರಿಕದಲ್ಲಿನ ಮಕ್ಕಳಿಗೆ ತಗುಲಿರುವ ಸೋಂಕು ಪ್ರಕರಣದಲ್ಲಿ ಶೇ.90ರಷ್ಚು ಏರಿಕೆ ಆಗಿದೆ ಎಂದು ಅಮೆರಿಕದ ಮಕ್ಕಳ ತಜ್ಞರ ಅಕಾಡೆಮಿ ಮತ್ತು ಮಕ್ಕಳ ಆಸ್ಪತ್ರೆಯ ಸಂಘಟನೆಯ ವರದಿಯಲ್ಲಿ ಹೇಳಲಾಗಿದೆ.

ಜುಲೈ9ರಿಂದ ಆಗಸ್ಟ್ 6ರ ವರೆಗಿನ ಅವಧಿಯಲ್ಲಿ 1,79,990 ಮಕ್ಕಳಿಗೆ ಕೊರೊನಾಸೋಂಕು ತಗಲಿದ್ದು ಈವರೆಗೆ ಸೋಂಕಿಗೀಡಾದವರ ಸಂಖ್ಯೆ 2,00,184ರಿಂದ 3,80,174ಕ್ಕೇರಿದೆ.

6.6 ಕೋಟಿಗಿಂತಲೂ ಹೆಚ್ಚು ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ: ಟ್ರಂಪ್
ಅಮೆರಿಕದಲ್ಲಿ ಈವರೆಗೆ 6.6 ಕೋಟಿ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 2,02,09,647 ಆಗಿದ್ದು ಸಾವಿನ ಸಂಖ್ಯೆ 7,39,960 ಆಗಿದೆ. ಅಮೆರಿಕದಲ್ಲಿ 51,4,1013 ಮಂದಿಗೆ ಸೋಂಕು ದೃಢಪಟ್ಟಿದ್ದು ಸಾವಿನ ಸಂಖ್ಯೆ 16,4,536ಕ್ಕೇರಿದೆ.

ಬ್ರೆಜಿಲ್‌- 30,57,470, ಭಾರತ - 22,68,675 , ರಷ್ಯಾದಲ್ಲಿ 89,5,691 ಸೋಂಕಿತರಿದ್ದಾರೆ. ಬ್ರೆಜಿಲ್‌ನಲ್ಲಿ 10,1752 ಮತ್ತು ಮೆಕ್ಸಿಕೊದಲ್ಲಿ 53,929 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT