ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಸಂಸತ್ತಿನಲ್ಲಿ ‘ದೀಪಾವಳಿ‘ ಶುಭಾಶಯ ನಿರ್ಣಯ

Last Updated 14 ನವೆಂಬರ್ 2020, 7:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯರ ಬೆಳಕಿನ ಹಬ್ಬ ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಸಾರುವ ನಿರ್ಣಯವನ್ನು ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕದ ಸಂಸತ್ತಿನ ಕೆಳಮನೆಯಲ್ಲಿ ಶನಿವಾರ ಮಂಡಿಸಿದರು.

ಸಂಸತ್ತಿನಲ್ಲಿ ಈ ನಿರ್ಣಯ ಮಂಡಿಸುವ ಮೂಲಕ ಅಮೆರಿಕದ ಪ್ರಮುಖ ಜನ ಪ್ರತಿನಿಧಿಗಳು ಭಾರತೀಯ–ಅಮೆರಿಕನ್ನರಿಗೆ ಬೆಳಕಿನ ಹಬ್ಬದ ಶುಭಾಶಯವನ್ನು ಕೋರಿದರು.

ಶನಿವಾರ ವಿಶ್ವದಾದ್ಯಂತ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅಮೆರಿಕದಲ್ಲಿರುವ ನಾಲ್ಕು ಕೋಟಿ ಹಿಂದೂ, ಸಿಖ್‌ ಮತ್ತು ಜೈನ್‌ ಅಮೆರಿಕನ್ನರು ಈ ಹಬ್ಬವನ್ನು ಆಚರಿಸುತ್ತಾರೆ. ಇದು ಕತ್ತಲೆಯ ವಿರುದ್ಧ ಬೆಳಕಿನ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದನ್ನು ಸೂಚಿಸುತ್ತದೆ.

ಅಮೆರಿಕಾದಲ್ಲಿರುವ ಭಾರತೀಯ ಮೂಲದ ಸಮುದಾಯಗಳಲ್ಲಿ ದೀಪಾವಳಿಯು ಪ್ರಮುಖ ಆಚರಣೆಯಾಗಿದೆ. ಇದನ್ನು ಗಮನಿಸಿದ ಅಮೆರಿಕದ ಪ್ರಮುಖ ಜನಪ್ರತಿನಿಧಿಗಳು ಕಾಂಗ್ರೆಸ್‌ನಲ್ಲಿ (ಕೆಳಮನೆ) ದ್ವಿಪಕ್ಷೀಯ ನಿರ್ಣಯವನ್ನು ಮಂಡಿಸಿದರು. ದೀಪಾವಳಿಯ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಗುರುತಿಸಿ, ಸಮುದಾಯದ ಸದಸ್ಯರು ಮತ್ತು ವಿಶ್ವದಾದ್ಯಂತ ಇರುವ ಭಾರತೀಯರಿಗಾಗಿ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT