ಮಂಗಳವಾರ, ಮಾರ್ಚ್ 28, 2023
34 °C

ಉಸಿರಾಟ, ಬೆವರಿನ ವಾಸನೆಯಿಂದಲೇ ಮನುಷ್ಯನ ಒತ್ತಡ ಪತ್ತೆ ಮಾಡುವ ಶ್ವಾನಗಳು: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಉಸಿರಾಟ, ಬೆವರಿನ ವಾಸನೆಯಿಂದಲೇ ಶ್ವಾನಗಳು ಮನುಷ್ಯನ ಒತ್ತಡದ ಮಟ್ಟವನ್ನು ಪತ್ತೆ ಮಾಡುತ್ತವೆ ಎಂದು ಬ್ರಿಟನ್ನಿನ ಅಧ್ಯಯನವೊಂದು ಹೇಳಿದೆ.

ಇತ್ತೀಚೆಗೆ, ಪ್ಲಸ್ ಒನ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ನಾಯಿಗಳು ಹೆಚ್ಚು ಸೂಕ್ಷ್ಮ ಮತ್ತು ಅರ್ಥಗರ್ಭಿತ ಪ್ರಾಣಿಗಳು ಎಂದು ಹೇಳಲಾಗಿದೆ.

ಸಂಶೋಧನೆಯಲ್ಲಿ ಬೆಲ್‌ಫಾಸ್ಟ್‌ನ ಟ್ರೆಯೊ, ಫಿಂಗಲ್, ಸೂಟ್ ಮತ್ತು ವಿನ್ನಿ ಎಂಬ ಹೆಸರಿನ ನಾಲ್ಕು ನಾಯಿಗಳು ಮತ್ತು 36 ಜನರು ಭಾಗವಹಿಸಿದ್ದರು. ಪ್ರತಿ ಪರೀಕ್ಷಾ ಅವಧಿಯಲ್ಲಿ, ಪ್ರತಿ ನಾಯಿಗೆ ಒಬ್ಬ ವ್ಯಕ್ತಿಯ ರಿಲ್ಯಾಕ್ಸ್ ಅವಧಿಯ ಮತ್ತು ಒತ್ತಡದ ಅವಧಿಯ ಬೆವರು ಮತ್ತು ಉಸಿರಾಟದ ಮಾದರಿಗಳನ್ನು ನೀಡಲಾಗಿತ್ತು. ಎಲ್ಲಾ ನಾಯಿಗಳು ಪ್ರತಿಯೊಬ್ಬ ವ್ಯಕ್ತಿಯ ಒತ್ತಡದ ಮಾದರಿಯನ್ನು ಸರಿಯಾಗಿ ಪತ್ತೆ ಮಾಡಿದವು.

‘ಒತ್ತಡಕ್ಕೆ ಒಳಗಾದಾಗ ಮನುಷ್ಯ ಬೆವರು ಮತ್ತು ಉಸಿರಾಟದ ಮೂಲಕ ವಿಭಿನ್ನ ವಾಸನೆಯನ್ನು ಹೊರಸೂಸುತ್ತಾನೆ. ಶ್ವಾನಗಳು ಆ ಬೆವರಿನ ವಾಸನೆಯನ್ನು ಗ್ರಹಿಸುತ್ತವೆ’ಎಂದುಕ್ವೀನ್ಸ್ ವಿಶ್ವವಿದ್ಯಾಲಯ ಬೆಲ್‌ಫಾಸ್ಟ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಕ್ಲಾರಾ ವಿಲ್ಸನ್ ಹೇಳಿದರು.

‘ಇದು ಈ ರೀತಿಯ ಮೊದಲ ಅಧ್ಯಯನವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದ ಸೇವೆಗಳಲ್ಲಿ ಬಳಸುವ ನಾಯಿಗಳಿಗೆ ತರಬೇತಿ ನೀಡುವಾಗ ಈ ಜ್ಞಾನವು ಉಪಯುಕ್ತವಾಗಬಹುದು’ಎಂದು ವಿಲ್ಸನ್ ಹೇಳಿದರು.

ಸಂಶೋಧನೆಯು ಮಾನವ-ನಾಯಿಗಳ ಸಂಬಂಧದ ಮೇಲೆ ಹೆಚ್ಚು ಬೆಳಕು ಚೆಲ್ಲಲು ಸಹಾಯ ಮಾಡುತ್ತದೆ. ಶ್ವಾನಗಳು ಮಾನವನ ಮಾನಸಿಕ ಸ್ಥಿತಿಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು ಮತ್ತು ಸಂವಹನ ನಡೆಸಬಹುದು ಎಂಬುದರ ಕುರಿತು ಈ ಅಧ್ಯಯನ ನಮ್ಮ ತಿಳುವಳಿಕೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸಂಶೋಧನೆಗೆ ಭಾಗವಹಿಸಿದ್ದ ಜನರು ಸ್ವಇಚ್ಛೆಯಿಂದ ತಮ್ಮ ಒತ್ತಡದ ಮಾಹಿತಿ ನೀಡಿದ್ದರು. ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಿದ್ದ ವ್ಯಕ್ತಿಗಳ ಮಾದರಿಗಳನ್ನು ಮಾತ್ರ ಸಂಶೋಧಕರು ಬಳಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು