ಸೋಮವಾರ, ಜೂನ್ 14, 2021
26 °C

ಬಾಗ್ದಾದ್‌: ಅಮೆರಿಕದ ಸೇನೆಯಿರುವ ಇರಾಕ್‌ ಸೇನಾ ನೆಲೆ ಮೇಲೆ ಡ್ರೋನ್ ದಾಳಿ

ಎಪಿ Updated:

ಅಕ್ಷರ ಗಾತ್ರ : | |

ಬಾಗ್ದಾದ್‌: ‘ಅಮೆರಿಕದ ಸೇನೆಯಿರುವ ಇರಾಕ್‌ನ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆ ಡ್ರೋನ್‌ ದಾಳಿ ನಡೆಸಲಾಗಿದೆ. ಈ ವೇಳೆ ಕೇವಲ ಸಣ್ಣ–ಪುಟ್ಟ ಹಾನಿಯುಂಟಾಗಿದೆ’ ಎಂದು ಇರಾಕ್‌ ಸೇನೆ ಮತ್ತು ಅಮೆರಿಕ ನೇತೃತ್ವದ ಮಿತ್ರ ಪಡೆಗಳು ತಿಳಿಸಿವೆ.

‘ಈ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತಿಲ್ಲ’ ಎಂದು ಮಿತ್ರಪಡೆಗಳ ವಕ್ತಾರ ವಾಯ್ನೆ ಮೊರೊಟ್ಟೊ ಅವರು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಏಪ್ರಿಲ್‌ ತಿಂಗಳಲ್ಲೂ ಇರ್ಬಿಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಲಾಗಿತ್ತು. ಈ ದಾಳಿಯನ್ನು ಇರಾನ್‌ ಬೆಂಬಲಿತ ಗುಂಪುಗಳು ನಡೆಸಿವೆ ಎಂದು ಅಮೆರಿಕ ದೂರಿತ್ತು.

‘ಅಮೆರಿಕದ ಸೇನೆಯಿರುವ ಬಾಗ್ದಾದ್‌ ಮತ್ತು ಇರಾಕ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ದಾಳಿ ನಡೆಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು